ADVERTISEMENT

ವಾಹನ ಕೊಡುಗೆ; ಕಾರ್ಯಕರ್ತರ ನಿರ್ಧಾರಕ್ಕೆ ಸಂಸದೆ ಅಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST

ತಿರುವನಂತಪುರ: ಕಾರ್ಯಕರ್ತರು, ಹಿತೈಷಿಗಳಿಂದ ದೇಣಿಗೆ ಸಂಗ್ರಹಿಸಿ ವಾಹನವನ್ನು ಖರೀದಿಸಿ ಕೊಡುವ ಯುವ ಕಾಂಗ್ರೆಸ್‌ ಘಟಕದ ನಿರ್ಧಾರಕ್ಕೆ ಕೇರಳದ ಸಂಸದೆ ರಮ್ಯಾ ಹರಿದಾಸ್‌ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಯುವಕಾಂಗ್ರೆಸ್‌ ತೀರ್ಮಾನಕ್ಕೆ ಕೇರಳದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್‌ ಅವರು ವಿರೋಧ ವ್ಯಕ್ತಪಡಿಸಿದ ಹಿಂದೆಯೇ ಅಸಮ್ಮತಿ ವ್ಯಕ್ತಪಡಿಸಿ ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.

ಅವರು ಪ್ರತಿನಿಧಿಸುವ ಅಲತ್ತೂರು ಕ್ಷೇತ್ರದ ಯುವ ಕಾಂಗ್ರೆಸ್‌ ಘಟಕ, ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ತಲಾ ₹ 1000 ದೇಣಿಗೆ ಸಂಗ್ರಹಿಸಿ, ₹ 14 ಲಕ್ಷ ಮೌಲ್ಯದ ವಾಹನ ಕೊಡಿಸಲು ತೀರ್ಮಾನಿಸಿತ್ತು.

ADVERTISEMENT

ಆದರೆ, ಸಂಸದೆಯಾಗಿ ರಮ್ಯಾ ₹ 1.9 ಲಕ್ಷ ಭತ್ಯೆ ಪಡೆಯುತ್ತಿದ್ದು, ಬಡ್ಡಿರಹಿತವಾದ ವಾಹನ ಸಾಲವನ್ನು ಪಡೆಯಲು ಅರ್ಹರಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಾಹನ ಕೊಡುಗೆ ನಿರ್ಧಾರ ಟೀಕೆಗೆ ಒಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.