ADVERTISEMENT

ವಿಧಿಯನ್ನು ಅತ್ಯಾಚಾರಕ್ಕೆ ಹೋಲಿಕೆ: ಕಾಂಗ್ರೆಸ್‌ ಸಂಸದ ಪತ್ನಿ ವಿರುದ್ಧ ಆಕ್ರೋಶ

ಪಿಟಿಐ
Published 23 ಅಕ್ಟೋಬರ್ 2019, 3:47 IST
Last Updated 23 ಅಕ್ಟೋಬರ್ 2019, 3:47 IST

ಕೊಚ್ಚಿ: ವಿಧಿ ಮತ್ತು ಅತ್ಯಾಚಾರ ನಡುವೆ ಸಾಮ್ಯತೆ ಕಲ್ಪಿಸಿ, ಕಾಂಗ್ರೆಸ್‌ನ ಸಂಸದ ಹಿಬಿ ಈಡನ್‌ ಪತ್ನಿ ಅನ್ನಾ ಲಿನಾ ಈಡನ್‌ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಲೇಖನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರು ಆಕ್ರೋಶ–ಅಸಮಾಧಾನ ಹೊರಹಾಕುತ್ತಿದ್ದಂತೆಯೇ ಎಚ್ಚರಗೊಂಡ ಅನ್ನಾ, ತಮ್ಮ ಲೇಖನ ಹಾಗೂ ವಿಡಿಯೊಗಳನ್ನು ತೆಗೆದು ಹಾಕಿದ್ದಾರೆ.‘ನನ್ನ ತಂದೆ ಆರೋಗ್ಯ ಹದಗೆಟ್ಟಿದ್ದು, ಆ ದುಃಖವನ್ನು ಮರೆಯುವ ಉದ್ದೇಶದಿಂದ ಈ ರೀತಿ ಬರೆದಿದ್ದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಏನಿದು ವಿವಾದ?: ‘ವಿಧಿ ಎಂಬುದು ಅತ್ಯಾಚಾರ ಇದ್ದಂತೆ. ಅದಕ್ಕೆ ಪ್ರತಿರೋಧ ಒಡ್ಡಲಾಗದಿದ್ದರೆ, ಅದನ್ನೇ ಸಂಭ್ರಮಿಸಬೇಕು’ ಎಂಬುದಾಗಿ ಅನ್ನಾ ಪೋಸ್ಟ್‌ ಹಾಕಿದ್ದರು.

ADVERTISEMENT

ಮಳೆ ನೀರು ಮನೆಗೆ ನುಗ್ಗಿತ್ತು. ತೊಂದರೆಯಲ್ಲಿ ಸಿಲುಕಿದ್ದ ಮಗಳು ಹೊರಬರಲು ಯತ್ನಿಸುತ್ತಿದ್ದಳು. ಇನ್ನೊಂದೆಡೆ, ಪತಿ ಬಿಸಿಬಿಸಿ ತಿಂಡಿ ತಿನ್ನುತ್ತಿದ್ದರು. ಈ ಎರಡು ವಿಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಅವರು, ಪತಿ ಹಾಗೂ ಮಗಳು ಅನುಭವಿಸುತ್ತಿದ್ದ ಪರಿಸ್ಥಿತಿಯನ್ನು ವಿವರಿಸಲು ಈ ವಾಕ್ಯ ಬರೆದಿದ್ದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.