ತಿರುವನಂತಪುರ: ಸ್ವಾತಂತ್ರ್ಯ ದಿನೋತ್ಸವದ ವೇಳೆ ಆರ್‌ಎಸ್ಎಸ್ ಗೀತೆ ಹಾಡಿಸುವ ಮೂಲಕ ಕೇರಳದ ಮಲಪ್ಪುರಂ ಜಿಲ್ಲೆಯ ಶಾಲೆಯೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಈ ಕುರಿತಂತೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಶಾಲೆಯಿಂದ ವಿವರಣೆ ಕೋರಿದ್ದಾರೆ.
ತಿರೂರು ತಾಲೂಕಿನ ಅಲತಿಯೂರಿನ ಕುಂಜಿಮೋನ್ ಹಾಜಿ ಸ್ಮಾರಕ ಪ್ರೌಢಶಾಲೆ ವಿವಾದಕ್ಕೆ ಗುರಿಯಾಗಿದೆ. ಶಾಲಾ ಸಿಬ್ಬಂದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೊವನ್ನು ಕೆಲವು ಆರ್‌ಎಸ್‌ಎಸ್ ಗುಂಪುಗಳು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ವಿವಿಧ ರಾಜಕೀಯ ಪಕ್ಷಗಳು ಶಾಲೆ ಬಳಿ ಪ್ರತಿಭಟನೆ ನಡೆಸಿದವು.
ಕೆಲವು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಿಂದ ಹಾಡನ್ನು ಕಲಿತಿದ್ದಾರೆ. ಅದು ಆರ್‌ಎಸ್‌ಎಸ್‌ನ ಗೀತೆ ಎಂಬುದನ್ನು ತಿಳಿಯದೆ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಹಾಡಿದ್ದಾರೆ ಎಂದು ಶಾಲಾ ಸಿಬ್ಬಂದಿ ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.