ADVERTISEMENT

ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು 'ವಾಟರ್‌ಬೆಲ್'

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 4:56 IST
Last Updated 17 ನವೆಂಬರ್ 2019, 4:56 IST
ಮಕ್ಕಳು ತರಗತಿಯಲ್ಲಿ ನೀರು ಕುಡಿಯುತ್ತಿರುವುದು (ಕೃಪೆ: ಟ್ವಿಟರ್)
ಮಕ್ಕಳು ತರಗತಿಯಲ್ಲಿ ನೀರು ಕುಡಿಯುತ್ತಿರುವುದು (ಕೃಪೆ: ಟ್ವಿಟರ್)   

ತಿರುವನಂತಪುರಂ: ಕೇರಳದ ಕೆಲವು ಶಾಲೆಗಳಲ್ಲಿ ತರಗತಿ ಆರಂಭ, ಮುಕ್ತಾಯಕ್ಕೆ ಮಾತ್ರವಲ್ಲ ಮಕ್ಕಳು ನೀರು ಕುಡಿಯಲು ನೆನಪಿಸುವುದಕ್ಕಾಗಿ ವಾಟರ್‌ಬೆಲ್ ವ್ಯವಸ್ಥೆಮಾಡಲಾಗಿದೆ.

ತರಗತಿಯಲ್ಲಿ ಮಕ್ಕಳು ನೀರು ಕುಡಿಯಬೇಕು ಎಂಬ ನಿಟ್ಟಿನಿಂದ ವಾಟರ್‌ಬೆಲ್ ಬಾರಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಸೂಚನೆಗಳ ನಿರ್ದೇಶಕ ಕೆ.ಜೀವನ್ ಬಾಬು, ವಿದ್ಯಾರ್ಥಿಗಳು ನೀರು ಕುಡಿಯುವಂತೆ ನೆನಪಿಸುವುದಕ್ಕಾಗಿ ಕೆಲವು ಶಾಲೆಗಳಲ್ಲಿ ಗಂಟೆ ಬಾರಿಸಲಾಗುತ್ತಿದೆ ಎಂಬ ಮಾಹಿತಿ ನಮಗೆ ಲಭಿಸಿದೆ. ಆದರೆ ಇಲ್ಲಿಯವರೆಗೆ ಎಲ್ಲ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿಲ್ಲ. ಮಕ್ಕಳು ಹೆಚ್ಚೆಚ್ಚು ನೀರು ಕುಡಿಯಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ ಎಂದು ಕೆಲವರು ವಾದಿಸಿದರೆ, ಮಕ್ಕಳು ಬಾಯಾರಿಕೆಯಾದಾಗಲೇ ನೀರು ಕುಡಿಯಬೇಕು ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ. ಹಾಗಾಗಿ ಈಬಗ್ಗೆ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತ್ರಿಶ್ಶೂರ್ ಜಿಲ್ಲೆಯ ಸೇಂಟ್ ಜಾಸೆಫ್ಸ್ ಯುಪಿ ಶಾಲೆ, ಚೆಲಕ್ಕರಾದಲ್ಲಿ ಮಕ್ಕಳು ನೀರು ಕುಡಿಯಲು ನೆನಪಿಸುವ ವಾಟರ್‌ಬೆಲ್‌ನ್ನು ಎರಡು ಬಾರಿ ಬಾರಿಸಲಾಗುತ್ತಿದೆ.

ADVERTISEMENT

ಮಕ್ಕಳು ಮನೆಯಿಂದ ನೀರು ತರುತ್ತಾರೆ. ಶಾಲೆಯಲ್ಲಿಯೂ ಕುಡಿಯುವ ನೀರು ಲಭ್ಯವಿದೆ. ಆದರೆ ಅವರು ನೀರು ಕುಡಿಯಲ್ಲ. ಸರಿಯಾಗಿ ನೀರು ಕುಡಿಯದೇ ಇರುವ ಕಾರಣ ಮೂತ್ರದ ಸೋಂಕು ಮೊದಲಾದ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದಾರೆ. ಹಾಗಾಗಿ ಹೆಚ್ಚೆಚ್ಚು ನೀರು ಕುಡಿಯುವಂತೆ ನಾವು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೇವೆ. ಆಗಾಗ ಟಾಯ್ಲೆಟ್‌ಗೆ ಹೋಗಿ ಬರುವುದನ್ನು ಕಡಿಮೆ ಮಾಡುವುದಕ್ಕಾಗಿ ಹೆಣ್ಣು ಮಕ್ಕಳು ನೀರು ಕುಡಿಯುವುದಿಲ್ಲ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಆ ಶಾಲೆಯ ಮುಖ್ಯೋಪಾಧ್ಯಾಯಿನಿ ಶೀಬಾ.ಪಿ.ಡಿ ಹೇಳಿದ್ದಾರೆ.

ಮಕ್ಕಳು ನಿಯಮಿತ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬು ಉದ್ದೇಶದಿಂದ ವಾಟರ್‌ಬೆಲ್ ಬಾರಿಸಲಾಗುತ್ತಿದೆ. ಬೆಳಗ್ಗೆ 11.15ಕ್ಕೆ ಮತ್ತು ಮಧ್ಯಾಹ್ನ ನಂತರ 2.45ಕ್ಕೆ ವಾಟರ್‌ಬೆಲ್ ಬಾರಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಗಂಟೆ ಬಾರಿಸಿದಾಗ ಬಾಟಲಿಯಿಂದ ಅಥವಾ ತರಗತಿ ಹೊರಗಿರುವ ಕುಡಿಯುವ ನೀರಿನ ನಲ್ಲಿಯಿಂದ ನೀರು ಕುಡಿಯಲೇ ಬೇಕು ಎಂದು ಶಾಲೆಯ ಪಿಟಿ ಟೀಚರ್ಜೆನಿಲ್ ಜಾನ್ ಹೇಳಿದ್ದಾರೆ.

ಎಲ್ಲ ಶಾಲೆಗಳಲ್ಲಿ ವಾಟರ್‌ಬೆಲ್ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಪ್ರಸ್ತಾಪವನ್ನು ಜೆನಿಲ್ ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಅವರ ಮುಂದಿರಿಸಿದ್ದಾರೆ. ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಈ ವರ್ಷ ಹಲವಾರು ಶಾಲೆಗಳು ವಾಟರ್‌ಬೆಲ್ ವ್ಯವಸ್ಥೆಯನ್ನು ಜಾರಿಗೆ ತಂದಿವೆ ಎಂದಿದ್ದಾರೆ ಜೆನಿಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.