ADVERTISEMENT

ಚಂಡೀಗಢ: ಬಿಷ್ಣೋಯಿ ಗ್ಯಾಂಗ್ ಪ್ರಮುಖ ಸದಸ್ಯನ ಬಂಧನ

ಪಿಟಿಐ
Published 8 ಜುಲೈ 2025, 14:46 IST
Last Updated 8 ಜುಲೈ 2025, 14:46 IST
...
...   

ಚಂಡೀಗಢ: ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಪ್ರಮುಖ ಸದಸ್ಯನನ್ನು ಬಂಧಿಸಿರುವುದಾಗಿ ಪಂಜಾಬ್‌ ಪೊಲೀಸ್ ಮಹಾನಿರ್ದೇಶಕ ಗೌರವ್‌ ಯಾದವ್‌ ಮಂಗಳವಾರ ಹೇಳಿದ್ದಾರೆ. ಬಂಧಿತನನ್ನು ಕಪುರ್ತಲಾ ಜಿಲ್ಲೆಯ ಫಗ್ವಾಡದ ನಿವಾಸಿ ಹಿಮಾಂಶು ಸೂದ್‌ ಎಂದು ಗುರುತಿಸಲಾಗಿದೆ.

ಲಾರೆನ್ಸ್‌ ಬಿಷ್ಣೋಯಿ ಆಪ್ತ ಎನ್ನಲಾದ, ದುಬೈನ ನಮೀತ್‌ ಶರ್ಮಾ ಎಂಬಾತನ ಆದೇಶದಂತೆ ಸೂದ್‌ ಪಂಜಾಬ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗಷ್ಟೇ ಹರಿದ್ವಾರದ ಹೋಟೆಲ್‌ ಮಾಲೀಕರೊಬ್ಬರ ಮೇಲೂ ಸೂದ್ ಗುಂಡಿನ ದಾಳಿ ನಡೆಸಿದ್ದ ಎಂದು ಯಾದವ್ ಮಾಹಿತಿ ನೀಡಿದ್ದಾರೆ. 

ಅಲ್ಲದೇ, ಶೀಘ್ರದಲ್ಲೇ ಮಧ್ಯಪ್ರದೇಶ ಹಾಗೂ ಕಪುರ್ತಲಾದಲ್ಲಿ ತಲಾ ಒಬ್ಬೊಬ್ಬರನ್ನು ಕೊಲ್ಲಲು ಆತನಿಗೆ ಶರ್ಮಾ ಆದೇಶ ನೀಡಿದ್ದ ಎಂದೂ ಯಾದವ್‌ ತಿಳಿಸಿದ್ದಾರೆ. ಬಂಧಿತನಿಂದ 3 ಪಿಸ್ತೂಲ್ ಹಾಗೂ 7 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿರುವುದಾಗಿಯೂ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.