ADVERTISEMENT

ಚಿನ್ನ ಕಳ್ಳಸಾಗಣೆ: ಯುಎಇಯಿಂದ ಭಾರತಕ್ಕೆ ಪ್ರಮುಖ ಆರೋಪಿ

ಪಿಟಿಐ
Published 10 ಸೆಪ್ಟೆಂಬರ್ 2024, 16:25 IST
Last Updated 10 ಸೆಪ್ಟೆಂಬರ್ 2024, 16:25 IST
   

ನವದೆಹಲಿ: ಅಂತರರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲದ ಪ್ರಮುಖ ಸದಸ್ಯನನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗಿದೆ. ಈತನ ವಿರುದ್ಧ ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಜಾರಿಯಾಗಿತ್ತು.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುನಿಯಾದ್ ಅಲಿಖಾನ್‌ನನ್ನು ಎನ್‌ಐಎ ಮತ್ತು ಇಂಟರ್‌ಪೋಲ್‌ ಸಹಯೋಗದಲ್ಲಿ ಸಿಬಿಐ ಭಾರತಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯುಎಇಯಿಂದ ಜೈಪುರ್‌ ವಿಮಾನನಿಲ್ದಾಣಕ್ಕೆ ಬಂದಿಳಿದ ಈತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದರು.

ADVERTISEMENT

ಚಿನ್ನದ ಗಟ್ಟಿಗಳನ್ನು ರಿಯಾದ್‌, ಸೌದಿ ಅರೇಬಿಯದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುವಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು ಎಂದು ಸಿಬಿಐನ ವಕ್ತಾರರು ತಿಳಿಸಿದ್ದಾರೆ.

ಇತರ ಇಬ್ಬರು ಆರೋಪಿಗಳಾಗಿದ್ದ ಶೋಕತ್‌ ಅಲಿ ಮತ್ತು ಮೊಹಬ್ಬತ್‌ ಅಲಿ ಅವರನ್ನು  ಸೌದಿ ಅರೇಬಿಯದಿಂದ ಕ್ರಮವಾಗಿ 2024ರ ಏಪ್ರಿಲ್‌ 3 ಮತ್ತು 2023ರ ಆಗಸ್ಟ್ 17ರಂದು ಕರೆತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.