ADVERTISEMENT

ಖಿಚಡಿ ಹಗರಣ: ಸಂಜಯ್‌ ರಾವುತ್ ತಮ್ಮನ ವಿಚಾರಣೆ

ಪಿಟಿಐ
Published 30 ಜನವರಿ 2024, 14:34 IST
Last Updated 30 ಜನವರಿ 2024, 14:34 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ: ಬೃಹತ್‌ ಮುಂಬೈ ನಗರಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಮಂಗಳವಾರ ಶಿವಸೇನೆ (ಉದ್ಧವ್‌ ಬಣ) ನಾಯಕ, ಸಂಸದ ಸಂಜಯ್ ರಾವುತ್ ಅವರ ತಮ್ಮ ಸಂದೀಪ್‌ ರಾವುತ್ ಅವರನ್ನು ವಿಚಾರಣೆಗೆ ಒಳಪಡಿಸಿದರು.

ಸಂಜಯ್ ರಾವುತ್ ಅವರ ಜೊತೆಗೂಡಿ ಇ.ಡಿ ಕಚೇರಿಗೆ ಬೆಳಿಗ್ಗೆ 11.30ಕ್ಕೆ ಬಂದ ಸಂದೀಪ್‌ ವಿಚಾರಣೆ ಎದುರಿಸಿದರು.

ಕೋವಿಡ್‌ ಅವಧಿಯಲ್ಲಿ ಮುಂಬೈನ ವಿವಿಧೆಡೆ ಅತಂತ್ರರಾಗಿ ಉಳಿದಿದ್ದ ವಲಸಿಗ ನೌಕರರಿಗೆ ಆಹಾರದ ಪ್ಯಾಕೆಟ್‌ ವಿತರಿಸುವ ಕೆಲಸದ ಗುತ್ತಿಗೆ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿರುವ ಕುರಿತ ಹಗರಣ ಇದಾಗಿದೆ.

ADVERTISEMENT

ಆದಿತ್ಯ ಠಾಕ್ರೆ ಅವರ ಆಪ್ತ, ಯುವಸೇನೆ ಪದಾಧಿಕಾರಿ ಸೂರಜ್‌ ಚವಾಣ್‌ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಬಂಧಿಸಿದೆ. ಗುತ್ತಿಗೆ ನೀಡುವಲ್ಲಿನ ಅಕ್ರಮದಲ್ಲಿ ಇವರು ₹ 1.35 ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.