ADVERTISEMENT

‘ನಾನು ಅವರಪ್ಪ’ ಎಂದ ಖುರ್ಷಿದ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:37 IST
Last Updated 23 ಏಪ್ರಿಲ್ 2019, 19:37 IST
ಖುರ್ಷಿದ್
ಖುರ್ಷಿದ್   

ಫರೂಕಾಬಾದ್ (ಪಿಟಿಐ):ಹಿಂದಿ ಸಿನಿಮಾದ ಪ್ರಸಿದ್ಧ ಡೈಲಾಗ್‌ ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ವಿರುದ್ಧ ತಿರುಗಿಸಿರುವ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್, ‘ನಾನು ಅವರಪ್ಪ’ (ಬಾಪ್) ಎಂದು ಹೇಳಿದ್ದಾರೆ.

ಫರೂಕಾಬಾದ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಖುರ್ಷಿದ್, ಬಾಟ್ಲಾ ಎನ್‌ಕೌಂಟ್ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಯೋಗಿ ಅವರಿಗೆ ಆಹ್ವಾನ ನೀಡಿದ್ದಾರೆ.

‘ಎಲ್ಲಿಯೇ ಆದರೂ, ಯಾವ ಸಮಯದಲ್ಲೇ ಆದರೂ ಚರ್ಚೆಗೆ ಸಿದ್ಧ. ಗೋಶಾಲೆಯಲ್ಲಿ ಚರ್ಚೆ ನಡೆಯುವುದಾದರೆ ಅದಕ್ಕೂ ಸಿದ್ಧ. ಆಗ ಗೋವುಗಳು ಯಾರ ಕಡೆಗೆ ಇರಲಿವೆ ಎಂಬುದೂ ತಿಳಿಯುತ್ತದೆ. ಯೋಗಿ ಜೀ, ನಾನು ನಿಮ್ಮಪ್ಪ ಇದ್ದಂತೆ’ ಎಂದು ಖುರ್ಷಿದ್ ಹೇಳಿದ್ದಾರೆ.

ADVERTISEMENT

ಬಿಜೆಪಿ ಅಭ್ಯರ್ಥಿ ಪರಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ಅವಧಿಯಲ್ಲಿ ಬಾಟ್ಲಾ ಎನ್‌ಕೌಂಟರ್ ನಡೆದಿತ್ತು. ಖುರ್ಷಿದ್ ಅವರಿಗೆ ಬಾಟ್ಲಾ ಹೌಸ್‌ನ ಜನರ ಜೊತೆ ಇದ್ದ ನಂಟು ಏನು? ಏಕೆ ಅವರ ಪರ ವಹಿಸಿದ್ದರು’ ಎಂದು ಯೋಗಿ ಪ್ರಶ್ನಿಸಿದ್ದರು. ಮೋದಿ ಅವರೂ ಎನ್‌ಕೌಂಟರ್‌ ಬಗ್ಗೆ ಪ್ರಸ್ತಾಪಿಸಿ, ‘ಕಾಂಗ್ರೆಸ್ ಮತಭಕ್ತಿ’ಯಲ್ಲಿ ತೊಡಗಿದೆ ಎಂದಿದ್ದರು.

ದೆಹಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿ ಶಂಕಿತ ಇಂಡಿಯನ್ ಮುಜಾಹಿದೀನ್ ಉಗ್ರರ ವಿರುದ್ಧ 2008ರ ಸೆಪ್ಟೆಂಬರ್ 19ರಂದು ಎನ್‌ಕೌಂಟರ್ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.