ADVERTISEMENT

ಆಂಧ್ರ‌ದಲ್ಲಿ ‌ಕಾರು ಅಪಘಾತ; ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2025, 4:36 IST
Last Updated 29 ನವೆಂಬರ್ 2025, 4:36 IST
<div class="paragraphs"><p>ಕಾರು ಅಪಘಾತ</p></div>

ಕಾರು ಅಪಘಾತ

   

Credit: iStock Photo

ಕೋಲಾರ: ಆಂಧ್ರ‌ ಪ್ರದೇಶದ ‌ಕರ್ನೂಲ್ ಜಿಲ್ಲೆಯ ಯಮ್ಮಿಗನೂರು ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕೋಲಾರ ಮೂಲದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ADVERTISEMENT

ವೆಂಕಟೇಶಪ್ಪ (70), ಸತೀಶ್ ಕುಮಾರ್ (34), ಮೀನಾಕ್ಷಿ (32), ಬನಿತ್ ಗೌಡ (5) ಹಾಗೂ ರಿತ್ವಿಕ್‌(4) ಮೃತರು.

ಚಾಲಕ ಚೇತನ್ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅದೋನಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಲಾರ‌ ಜಿಲ್ಲೆಯ ಚೊಕ್ಕಹೊಸಹಳ್ಳಿ ಗ್ರಾಮದ ಏಳು ಮಂದಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ (KA07B9672) ಮಂತ್ರಾಲಯಕ್ಕೆ ತೆರಳುತ್ತಿದ್ದರು. ಆಗ ಅದೋನಿಯಿಂದ ಬರುತ್ತಿದ್ದ ಫಾರ್ಚೂನರ್ (AP39SS2020) ಕಾರಿನೊಂದಿಗೆ‌ ಮುಖಾಮುಖಿ ಡಿಕ್ಕಿಯಾಗಿದೆ.

ಫಾರ್ಚೂನರ್ ಕಾರಿನಲ್ಲಿದ್ದ ಆಂಧ್ರದ ಮೂವರು ಗಾಯಗೊಂಡಿದ್ದು,‌‌ ಅವರು‌ ಕೂಡ ‌ಅದೋನಿ‌‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ‌ ಪಡೆಯುತ್ತಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.