ADVERTISEMENT

ಕೊಲ್ಹಾಪುರಿ ಚಪ್ಪಲಿ ತನ್ನದೆಂದು ಪ್ರದರ್ಶಿಸಿರುವ ಇಟಲಿ ಕಂಪನಿ ವಿರುದ್ಧ ಪಿಐಎಲ್‌

ಪಿಟಿಐ
Published 4 ಜುಲೈ 2025, 14:14 IST
Last Updated 4 ಜುಲೈ 2025, 14:14 IST
   

ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳನ್ನು ತನ್ನದೆಂದು ಪ್ರದರ್ಶಿಸಿರುವ ಇಟಲಿಯ ‘ಪ್ರಾಡಾ’ ಕಂಪನಿಯ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸಲ್ಲಿಸಲಾಗಿದೆ.

ವಿನ್ಯಾಸವನ್ನು ನಕಲು ಮಾಡಿದ್ದಕ್ಕೆ ಪ್ರತಿಯಾಗಿ ಭಾರತೀಯ ಕುಶಲಕರ್ಮಿಗಳಿಗೆ ಪರಿಹಾರ ನೀಡಬೇಕೆಂದು ಕೋರಲಾಗಿದೆ.

ಪ್ರಾಡಾ ಕಂಪನಿಯು ಪ್ರದರ್ಶಿಸಿರುವ ಚಪ್ಪಲಿಗಳು ಕೊಲ್ಹಾಪುರಿ ಚಪ್ಪಲಿಗಳಂತೆಯೇ ಇವೆ. ಒಂದು ಜೊತೆ ಚಪ್ಪಲಿಗೆ ₹1 ಲಕ್ಷ ಬೆಲೆ ನಿಗದಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

‘ಕೊಲ್ಹಾಪುರಿ ಚಪ್ಪಲಿಗಳು ಮಹಾರಾಷ್ಟ್ರದ ಸಂಸ್ಕೃತಿಯ ಸಂಕೇತ. ಅನುಮತಿ ಪಡೆಯದೆ ಈ ಮಾದರಿಯ ಚಪ್ಪಲಿಗಳನ್ನು ಮಾರಾಟ ಮಾಡುತ್ತಿರುವ ಕಂಪನಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ನಿರ್ದೇಶನ ನೀಡಬೇಕು’ ಎಂದು ಪುಣೆ ಮೂಲದ ಆರು ವಕೀಲರು ಮನವಿ ಮಾಡಿದ್ದಾರೆ.

ಕುಶಲಕರ್ಮಿಗಳು ಮತ್ತು ಜಿಐ ನೋಂದಣಿ ಪಡೆದಿರುವ ಸಂಸ್ಥೆಗಳ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಾಡಾ ವಿರುದ್ಧ ತನಿಖೆಗೆ ಆದೇಶಿಸಬೇಕು. ಪ್ರಾಡಾ ಕಂಪನಿಯು ಈ ಚಪ್ಪಲಿಗಳ ಮಾರಾಟ, ರಫ್ತು ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದಾರೆ.

ಕೊಲ್ಹಾಪುರಿ ಚಪ್ಪಲಿಗಳು ಸರಕುಗಳ ಭೌಗೋಳಿಕ ಗುರುತು (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆಯಡಿ ಭೌಗೋಳಿಕ ಗುರುತು (ಜಿಯಾಗ್ರಾಫಿಕಲ್ ಇಂಡಿಕೇಷನ್‌–ಜಿಐ) ನೋಂದಣಿ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.