ADVERTISEMENT

62 ಪ್ರಯಾಣಿಕರಿದ್ದ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 15:48 IST
Last Updated 2 ಏಪ್ರಿಲ್ 2022, 15:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಂಚಿ: ಹಾರಾಟ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೋಲ್ಕತ್ತ ಮಾರ್ಗದ ಇಂಡಿಗೊ ವಿಮಾನವು ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

ವಿಮಾನದಲ್ಲಿದ್ದ 62 ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

ವಿಮಾನದ ಪೈಲಟ್ ಸಹಾಯಕ್ಕಾಗಿ ತುರ್ತು ಸಂದೇಶ (ಮೇ ಡೇ: ಮಾರಣಾಂತಿಕ ತುರ್ತುಸ್ಥಿತಿ) ಕಳಹಿಸಿದ ಕಾರಣ ರಾಂಚಿಯಲ್ಲಿ ವಿಮಾನ ಇಳಿಸಲು ಅವಕಾಶ ನೀಡಲಾಯಿತು. ಪ್ರಕರಣದ ತನಿಖೆಗೆ ಸರ್ಕಾರ ಆದೇಶ ನೀಡಿದೆ.

ADVERTISEMENT

ವಿಮಾನದದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಮುಂಜಾಗರೂಕತೆ ಕ್ರಮವಾಗಿ ಭೂಸ್ಪರ್ಶ ಮಾಡಿಸಲಾಯಿತು ಎಂದು ಡಿಜಿಸಿಎ ತಿಳಿಸಿದೆ.

ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೊ ಹಾಗೂ ಗೋ ಏರ್ ಸಂಸ್ಥೆಗಳ ವಿಮಾನಗಳಲ್ಲಿ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಬಳಸಲಾಗುತ್ತಿದೆ. ಬಳಕೆ ಶುರುವಾದಾಗಿನಿಂದಲೂ ಹಾರಾಟದ ಸಮಯದಲ್ಲಿ ಈ ಎಂಜಿನ್‌ಗಳು ಗಂಭೀರ ತೊಡಕು ಉಂಟು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.