ADVERTISEMENT

ಸಾರಿ ಮಮ್ಮಿ, ಪಪ್ಪಾ... JEE ಬರೆಯಲು ನನ್ನಿಂದ ಆಗುತ್ತಿಲ್ಲ: ಮಗಳ ಡೆತ್‌ ನೋಟ್‌

ಪಿಟಿಐ
Published 29 ಜನವರಿ 2024, 11:01 IST
Last Updated 29 ಜನವರಿ 2024, 11:01 IST
<div class="paragraphs"><p>ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)</p></div>

ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)

   

ಕೋಟಾ (ರಾಜಸ್ಥಾನ): ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

‘ನನ್ನಿಂದ ಜೆಇಇ (JEE) ಪಾಸ್‌ ಮಾಡಲು ಸಾಧ್ಯವಿಲ್ಲ, ನಾನು ಸೋತಿದ್ದೇನೆ’ ಎಂದು ಪೋಷಕರಿಗೆ ಪತ್ರ ಬರೆದಿಟ್ಟು ಕೋಟಾದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ADVERTISEMENT

ನಿಹಾರಿಕಾ ಸಿಂಗ್‌ ಮೃತ ವಿದ್ಯಾರ್ಥಿನಿ. ‘ನಾನು ಸೋತಿರುವವಳು. ನಾನೊಬ್ಬ ಕೆಟ್ಟ ಮಗಳು, ಮಮ್ಮಿ, ಪಪ್ಪಾ  ಕ್ಷಮಿಸಿ, ಇದೇ ಕೊನೆಯ ಆಯ್ಕೆ’ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾಳೆ.

ಕೋಟಾದಲ್ಲಿ ತನ್ನ ಕುಟುಂಬದೊಂದಿಗೆ ನಿಹಾರಿಕಾ ವಾಸವಿದ್ದಳು. ಜ. 30 ಮತ್ತು 31 ರಂದು ಆಕೆ ಜೆಇಇ ಪರೀಕ್ಷೆ ಬರೆಯಬೇಕಿತ್ತು.

ಡೆತ್‌ ನೋಟ್‌ ನೋಡಿದರೆ ವಿದ್ಯಾರ್ಥಿನಿ ಅತಿಯಾದ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾಗಿರುವಂತೆ ಕಾಣುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ನಿಹಾರಿಕಾ ಅವರ ಅಜ್ಜಿ ನಿನ್ನೆ ರಾತ್ರಿ 10 ಗಂಟೆಯ ವೇಳೆಗೆ ಆಕೆಯ ಕೋಣೆಯ ಬಾಗಿಲು ಬಡಿದಾಗ ಉತ್ತರ ಬಾರದಿದ್ದನ್ನು ಗಮನಿಸಿ ಮನೆಯವರಿಗೆ ತಿಳಿಸಿದ್ದಾರೆ. ಮನೆಯ ಸದಸ್ಯರು ಕೋಣೆಯ ಕಿಟಕಿಯಲ್ಲಿ ನೋಡಿದಾಗ ನಿಹಾರಿಕಾ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.