ADVERTISEMENT

ಲತಾ ಮಂಗೇಶ್ಕರ್ ಅವರನ್ನು ಭೇಟಿಯಾದ ರಾಷ್ಟ್ರಪತಿ

ಪಿಟಿಐ
Published 18 ಆಗಸ್ಟ್ 2019, 12:51 IST
Last Updated 18 ಆಗಸ್ಟ್ 2019, 12:51 IST
ಮುಂಬೈನಲ್ಲಿ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಪೇಂಟಿಂಗ್‌ ವೊಂದನ್ನು ಉಡುಗೊರೆಯಾಗಿ ನೀಡಿದರು. ಪಿಟಿಐ ಚಿತ್ರ 
ಮುಂಬೈನಲ್ಲಿ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಪೇಂಟಿಂಗ್‌ ವೊಂದನ್ನು ಉಡುಗೊರೆಯಾಗಿ ನೀಡಿದರು. ಪಿಟಿಐ ಚಿತ್ರ    

ಮುಂಬೈ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (89) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ದಕ್ಷಿಣ ಮುಂಬೈನಲ್ಲಿರುವ ಲತಾ ಅವರ ಮನೆಗೆ ಭೇಟಿ ಕೊಡುವ ಮುನ್ನ, ಕೋವಿಂದ್ ಅವರು ರಾಜ್‌ಭವನದಲ್ಲಿ ‘ಬಂಕರ್ ಮ್ಯೂಸಿಯಂ’ ಅನ್ನು ಉದ್ಘಾಟಿಸಿದರು.

‘ಮುಂಬೈನಲ್ಲಿ ಲತಾ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು ಸಂತೋಷವಾಯಿತು. ಅವರು ಆರೋಗ್ಯವಾಗಿರಲೆಂದು ಹಾರೈಸಿದೆ. ಲತಾ ಜೀ ಭಾರತದ ಹೆಮ್ಮೆ. ಅವರ ಸುಮಧುರ ಕಂಠದಿಂದ ನಮ್ಮ ಜೀವನವನ್ನು ಸಿಹಿಯನ್ನಾಗಿಸಿದ್ದಾರೆ. ಸರಳತೆಯಿಂದಾಗಿ ಅವರು ನಮಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿರುತ್ತಾರೆ’ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಯಾಗಿ ಲತಾ ಅವರು ‘ನಮಸ್ಕಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನನ್ನ ಮನೆಗೆ ಬಂದು ನನ್ನನ್ನು ಭೇಟಿ ಮಾಡಿದ್ದು ನನ್ನಲ್ಲಿ ವಿನಮ್ರತೆ ಮತ್ತು ಗೌರವ ಮೂಡಿಸಿದೆ. ಸರ್. ನೀವು ನಮಗೆ ಹೆಮ್ಮೆಯುಂಟು ಮಾಡಿದಿರಿ!’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.