ADVERTISEMENT

ಕೃಷ್ಣಾ ಪೂನಿಯಾ ಈಗ ಶಾಸಕಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:18 IST
Last Updated 12 ಡಿಸೆಂಬರ್ 2018, 19:18 IST
ಕೃಷ್ಣಾ ಪೂನಿಯಾ
ಕೃಷ್ಣಾ ಪೂನಿಯಾ   

ನವದೆಹಲಿ : ಅಥ್ಲೀಟ್ ಕೃಷ್ಣಾ ಪೂನಿಯಾ ಅವರು ರಾಜಸ್ಥಾನದ ಸಾದುಲ್‌ಪುರ ಕ್ಷೇತ್ರದ ಚುನಾವಣೆಯಲ್ಲಿ ಜಯಿಸಿದ್ದಾರೆ.

2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅವರು ಡಿಸ್ಕಸ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ಮೂಲತಃ ಹರಿಯಾಣದವರು. ಮದುವೆಯ ನಂತರ ರಾಜಸ್ಥಾನದಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.

ಅವರು ಕಾಂಗ್ರೆಸ್‌ ಪಕ್ಷದ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಒಟ್ಟು 70,020 ಮತಗಳನ್ನು ಗಳಿಸಿದ್ದಾರೆ. ಎದುರಾಳಿ ಬಿಎಸ್‌ಪಿ ಪಕ್ಷದ ಮನೋಜ್ ನ್ಯಾಂಗಲಿ ಅವರನ್ನು 18.084 ಮತಗಳಿಂದ ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.