ADVERTISEMENT

ಕಾಟನ್‌ ಕ್ಯಾಂಡಿ ಬಜೆಟ್‌–ಕುಮಾರಸ್ವಾಮಿ, ಇದು ಜನಸಾಮಾನ್ಯರ ಬಜೆಟ್‌–ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 15:12 IST
Last Updated 1 ಫೆಬ್ರುವರಿ 2019, 15:12 IST
   

ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆನೀಡಿದ್ದುಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ’ಕಾಟನ್‌ ಕ್ಯಾಂಡಿ’ ನೀಡಿದ್ದಾರೆ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿಗಳುಕರ್ನಾಟಕ ಸರ್ಕಾರ 44 ಲಕ್ಷರೈತರಿಗೆ ಅನುಕೂಲವಾಗಲಿ ಎಂದು ₹48 ಸಾವಿರ ಕೋಟಿಗಳ ಆರ್ಥಿಕ ನೆರವನ್ನುಘೋಷಣೆ ಮಾಡಿತ್ತು. ಆಗ ಪ್ರಧಾನಿಗಳು ’ಲಾಲಿ ಪಪ್’ ಎಂದು ಗೇಲಿ ಮಾಡಿದ್ದರು. ಇದೀಗ ಮೋದಿ ಅವರು ರೈತರ ಖಾತೆಗೆ 6 ಸಾವಿರ ರೂಪಾಯಿ ಹಾಕುವುದಾಗಿ ಹೇಳಿದ್ದಾರೆ, ಇದೇನೂ ಕಾಟನ್‌ ಕ್ಯಾಂಡಿಯೇ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ಬಜೆಟ್‌ ನಿರಾಶದಾಯಕವಾಗಿದೆಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಕೇಂದ್ರ ಬಜೆಟ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.ಕೇಂದ್ರ ಸರಕಾರಜನಸಾಮಾನ್ಯರ, ಮಧ್ಯಮ ವರ್ಗದವರ, ರೈತರ ಪರವಾಗಿರುವ ಬಜೆಟ್ ಮಂಡಿಸಿದೆ. ಉತ್ತಮ ಬಜೆಟ್ ನೀಡಿದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದಗಳು. ಬಿಜೆಪಿಯು ಜನಪರ, ರೈತರ ಪರ ಎಂಬುದು ಮತ್ತೆ ಸಾಬೀತಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಲೋಕಸಭೆಯಲ್ಲಿ ಇಂದು ಮಂಡಿಸಲಾದ ಮಧ್ಯಂತರ ಬಜೆಟ್ ಸಮಾಜದ ಎಲ್ಲ ವಲಯ ಮತ್ತು ವರ್ಗಗಳ ಜನರ ಹಿತವನ್ನು ಕಾಯ್ದುಕೊಂಡಿದೆ ಹಾಗೂ ದೇಶವನ್ನು ಬಲಿಷ್ಠಗೊಳಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಮವರ್ಗಕ್ಕೆ ತೆರಿಗೆ ಮಿತಿ ಏರಿಸಿರುವುದನ್ನು ಸ್ವಾಗತಿಸುತ್ತೇನೆ. ತಿಂಗಳಿಗೆ 500 ರೂಪಾಯಿಯಲ್ಲಿ ರೈತರು ಗೌರವಯುತ ಜೀವನ ನಿರ್ವಹಿಸಲು ಸಾಧ್ಯವೇ?ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್‌ ಮಾಡಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಇದು. ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ಆಗಿರುವ ಭಾರಿ ವೈಫಲ್ಯವನ್ನು ಮರೆಮಾಚುವ ಯತ್ನ ಇಲ್ಲಿದೆ ಎಂದು ಸಿಪಿಐ ಮುಖಂಡಡಿ.ರಾಜಾ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಬಜೆಟ್ ಬಿಜೆಪಿ ಪ್ರಣಾಳಿಕೆ ಇದ್ದಂತಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಮತದಾರರಿಗೆ ಲಂಚ ನೀಡಲು ಬಿಜೆಪಿ ಈ ಮೂಲಕ ಯತ್ನಿಸಿದೆ. ಇವು ಕೇವಲ ಹುಸಿ ಭರವಸೆಗಳು ಎಂದುಲೋಕಸಭೆಯಕಾಂಗ್ರೆಸ್ ನಾಯಕಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.