ಮುಂಬೈ: ‘ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮುಂಬೈಗೆ ಕಾಲಿಟ್ಟರೆ, ಅವರನ್ನು ಶಿವಸೇನಾ ಶೈಲಿಯಲ್ಲಿ ಸ್ವಾಗತ ಮಾಡಲಾಗುವುದು’ ಎಂದು ಶಿವಸೇನಾ ಮುಖಂಡ ರಾಹುಲ್ ಕನಾಲ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಕಾಮ್ರಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆದಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಶಿವಸೈನಿಕರ ಗುಂಪೊಂದು ರಾಹುಲ್ ಕನಾಲ್ ನೇತೃತ್ವದಲ್ಲಿ ಮಾರ್ಚ್ 23ರಂದು ಕಾಮ್ರಾ ಕಾರ್ಯಕ್ರಮ ನೀಡಿದ್ದ ಸ್ಟುಡಿಯೊವನ್ನು ಧ್ವಂಸ ಮಾಡಿತ್ತು.
‘ಶಿವಸೈನಿಕರು ಪ್ರತಿ ಸೋಮವಾರ ಹಾಗೂ ಗುರುವಾರ ಪೊಲೀಸ್ ಠಾಣೆಯ ಮುಂದೆ ಹಾಜರಾಗುತ್ತಿದ್ದಾರೆ. ಕಾಮ್ರಾ ಪ್ರಕರಣದ ಸ್ಥಿತಿಗತಿ ಕುರಿತು ವಿಚಾರಿಸುತ್ತಿದ್ದೇವೆ. ಆದಷ್ಟು ಬೇಗ ಅವರನ್ನು ಮುಂಬೈ ಪೊಲೀಸರು ಕರೆತರಲಿದ್ದಾರೆ’ ಎಂದು ತಿಳಿಸಿದರು.
‘ಮುಂಬೈ ನಗರವು ‘ಅತಿಥಿ ದೇವೋಭವ’ ತತ್ವವನ್ನು ಪಾಲಿಸುತ್ತದೆ. ನಾವು ಶಿವಸೇನಾ ಶೈಲಿಯಲ್ಲಿಯೇ, ಮುಂಬೈಗೆ ಬಂದರೆ ಕಾಮ್ರಾ ಅವರನ್ನು ಸ್ವಾಗತಿಸಲಿದ್ದೇವೆ’ ಎಂದು ಕನಾಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.