ನವದೆಹಲಿ: ಭಾರತೀಯ ಪತ್ರಿಕಾ ಸಂಘದ (ಐಎನ್‌ಎಸ್) 2020–21ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಎಲ್.ಆದಿಮೂಲಂ ಅವರನ್ನು ಆಯ್ಕೆ ಮಾಡಲಾಗಿದೆ.
ಆದಿಮೂಲಂ ಅವರು ‘ಹೆಲ್ತ್ ಆ್ಯಂಡ್ ಆ್ಯಂಟಿಸೆಪ್ಟಿಕ್’ ನಿಯತಕಾಲಿಕೆಯನ್ನು ಮುನ್ನಡೆಸುತ್ತಿದ್ದಾರೆ. ಆದಿಮೂಲಂ ಅವರು ಐಎನ್‌ಎಸ್‌ನ ಮಾಜಿ ಅಧ್ಯಕ್ಷ ಹಾಗೂ ತಮಿಳು ದೈನಿಕ ‘ದಿನಮಲರ್’ ಮಾಲೀಕರಾದ ಡಾ.ಆರ್.ಲಕ್ಷ್ಮೀಪತಿ ಅವರ ಪುತ್ರ.
ಬೆಂಗಳೂರಿನಲ್ಲಿ ನಡೆದ ಸಂಘದ 81ನೇ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಡೆಪ್ಯುಟಿ ವೈಸ್‌ಪ್ರೆಸಿಡೆಂಟ್ ಆಗಿ ಡಿ.ಡಿ.ಪುರಕಾಯಸ್ಥ (ಆನಂದ್ ಬಜಾರ್ ಪತ್ರಿಕಾ), ವೈಸ್ ಪ್ರೆಸಿಡೆಂಟ್ ಆಗಿ ಮೋಹಿತ್ ಜೈನ್ (ಎಕನಾಮಿಕ್ಸ್ ಟೈಮ್ಸ್), ಗೌರವ ಕೋಶಾಧ್ಯಕ್ಷರಾಗಿ ರಾಕೇಶ್ ಶರ್ಮಾ (ಆಜ್ ಸಮಾಜ್) ಅವರು ಆಯ್ಕೆಯಾಗಿದ್ದಾರೆ. ಮೇರಿ ಪೌಲ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಎಂದು ಐಎನ್‌ಎಸ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.