ADVERTISEMENT

ನವದೆಹಲಿ: ಶ್ರಮಶಕ್ತಿ ಭವನದ 11 ಸಿಬ್ಬಂದಿಗೆ ಕೋವಿಡ್‌–19 ದೃಢ

ಪಿಟಿಐ
Published 7 ಜೂನ್ 2020, 16:53 IST
Last Updated 7 ಜೂನ್ 2020, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 11 ಸಿಬ್ಬಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

‘ಸಚಿವಾಲಯದ ಜಂಟಿ ಕಾರ್ಯದರ್ಶಿ, ಸ್ಟೆನೊಗ್ರಾಫರ್, ಪ್ರಧಾನ ಕಾರ್ಯದರ್ಶಿ, ಖಾಸಗಿ ಕಾರ್ಯದರ್ಶಿ, ಆರು ಮಂದಿ ಸಹಾಯಕರು ಮತ್ತು ವಾಹನ ಚಾಲಕಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಆರಂಭಿಕ ಪರೀಕ್ಷೆಯಲ್ಲಿ ಕಾರ್ಮಿಕ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು’ ಎಂದು ಮೂಲಗಳು ಹೇಳಿವೆ.

ಕಳೆದ ವಾರ ಇಬ್ಬರು ಸಿಬ್ಬಂದಿಗೆ ಕೋವಿಡ್‌–19 ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವಾಲಯದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೂನ್ 4 ಮತ್ತು 5ರಂದು ಸಚಿವಾಲಯದ ಶ್ರಮಶಕ್ತಿ ಭವನ ಕಟ್ಟಡವನ್ನು ಸೋಂಕುಮುಕ್ತಗೊಳಿಸುವ ಕಾರಣಕ್ಕಾಗಿ ಮುಚ್ಚಲಾಗಿತ್ತು.

ADVERTISEMENT

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಶ್ರಮಶಕ್ತಿ ಭವನ ಸೋಮವಾರ ತೆರೆಯುವ ನಿರೀಕ್ಷೆ ಇದೆ. ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಗುರುವಾರ ಮತ್ತು ಶುಕ್ರವಾರ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.