ADVERTISEMENT

ವಿಡಿಯೊ | ಲಡಾಖ್‌ ಗಡಿ: ಭಾರತೀಯ ವಾಯುಪಡೆಯಿಂದ ಫೈಟರ್‌ ಜೆಟ್‌ ಹಾರಾಟ

ಏಜೆನ್ಸೀಸ್
Published 23 ಜೂನ್ 2020, 7:20 IST
Last Updated 23 ಜೂನ್ 2020, 7:20 IST
ಭಾರತೀಯ ವಾಯುಪಡೆಯ ವಿಮಾನಗಳು (ಸಂಗ್ರಹ ಚಿತ್ರ)
ಭಾರತೀಯ ವಾಯುಪಡೆಯ ವಿಮಾನಗಳು (ಸಂಗ್ರಹ ಚಿತ್ರ)   

ನವದೆಹಲಿ:ಲಡಾಖ್‌ನ ಪೂರ್ವ ಭಾಗದಲ್ಲಿನ ವಿವಾದಿತ ಪ್ರದೇಶದ ಸಮೀಪದ ನೆಲೆಗಳಲ್ಲಿ ಭಾರತ ಸೇನಾ ಪಡೆ, ಯುದ್ಧ ವಾಹನಗಳು ಹಾಗೂ ಭಾರಿ ಉಪಕರಣಗಳನ್ನು ನಿಯೋಜಿಸಿದೆ. ಜೊತೆಗೆ, ಮಂಗಳವಾರ ವಾಯುಪಡೆಯ ಫೈಟರ್‌ ಜೆಟ್‌ಗಳುಹಾರಾಟ ನಡೆಸುತ್ತಿವೆ.

ಗಡಿ ವಿವಾದವನ್ನು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳು ಹೇಳಿಕೆ ನೀಡಿವೆ. ಹಾಗಿದ್ದರೂ ಗಡಿಯಲ್ಲಿ ಸೇನಾ ಚಟುವಟಿಕೆ ಬಿರುಸುಗೊಂಡಿರುವುದಾಗಿ ವರದಿಯಾಗಿದೆ.

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದ ನೆಲೆಗಳಿಗೆ ಯುದ್ಧ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಸಾಗಿಸಿದೆ. ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ನಿರಂತರವಾಗಿ ನಿಗಾ ವಹಿಸಿದೆ.

ಇತ್ತೀಚಿಗೆ ಚೀನಾದೊಂದಿಗೆ ಸಂಘರ್ಷ ಆರಂಭವಾದ ಬಳಿಕ ಈ ಪ್ರದೇಶದಲ್ಲಿ ವಾಯುಪಡೆಯ ಚಟುವಟಿಕೆ ಹೆಚ್ಚಾಗಿದೆ.

ಇಸ್ರೇಲ್‌ ನಿರ್ಮಿತ ಡ್ರೋಣ್‌ ಬಳಕೆ

ಚೀನಾ ಜತೆಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಇಂಡೊ– ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ), ಇಸ್ರೇಲ್‌ ನಿರ್ಮಿತ ಡ್ರೋಣ್‌ಗಳನ್ನು ಬಳಸುವ ಮೂಲಕ ಭಾರತ ತಾಂತ್ರಿಕ ಕಣ್ಗಾವಲು ಹೆಚ್ಚಿಸಿದೆ. ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ಹೆಚ್ಚಿನ ನಿಗಾ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.