ADVERTISEMENT

ಮಾಘ ಪೂರ್ಣಿಮೆ: ಕೋವಿಡ್ ನಡುವೆಯೇ ಗಂಗಾ ನದಿಯಲ್ಲಿ ಲಕ್ಷಾಂತರ ಭಕ್ತರಿಂದ ಸ್ನಾನ

ಪಿಟಿಐ
Published 16 ಫೆಬ್ರುವರಿ 2022, 13:00 IST
Last Updated 16 ಫೆಬ್ರುವರಿ 2022, 13:00 IST
ಪ್ರಯಾಗ್ ರಾಜ್‌ನಲ್ಲಿ ಭಕ್ತರ ಸಂಭ್ರಮಾಚರಣೆ: ಪಿಟಿಐ ಚಿತ್ರ
ಪ್ರಯಾಗ್ ರಾಜ್‌ನಲ್ಲಿ ಭಕ್ತರ ಸಂಭ್ರಮಾಚರಣೆ: ಪಿಟಿಐ ಚಿತ್ರ   

ಪ್ರಯಾಗ್‌ರಾಜ್: ಕೋವಿಡ್ ಸಾಂಕ್ರಾಮಿಕದ ಆತಂಕದ ನಡುವೆಯೂ ಲಕ್ಷಾಂತರ ಭಕ್ತರು ಮಾಘ ಪೂರ್ಣಿಮೆ ಅಂಗವಾಗಿ ಇಲ್ಲಿನ ಗಂಗಾ ನದಿಯಲ್ಲಿ ಮಿಂದೆದ್ದರು.

ಮಾಘ ಮಾಸದ ಆಚರಣೆಗಾಗಿ ಭದ್ರತೆ ಹೆಚ್ಚಿಸಲಾಗಿದ್ದು, 150 ಸಿಸಿಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಮಿಶ್ರಾ ಹೇಳಿದ್ದಾರೆ.

ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಬೆಳಗ್ಗಿನಿಂದ ಸುಮಾರು 4.5 ಲಕ್ಷ ಮಂದಿ ಗಂಗಾ ನದಿ ಮತ್ತು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಪ್ರಯಾಗ್ ರಾಜ್‌ನ ಮೇಳ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಹಲವು ಅಗ್ನಿಶಾಮಕ ವಾಹನ, 108 ಮುಳುಗು ತಜ್ಞರನ್ನು ಸಹ ಸ್ಥಳಲ್ಲಿ ನಿಯೋಜಿಸಲಾಗಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಗುರುವಾರ ರಾತ್ರಿ 10ರವರೆಗೆ ಸಂಗಮದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಸ್‌ಪಿ ನಾರಾಯಣ್ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.