ADVERTISEMENT

ಸಿಕ್ಕಿಂ: ಭಾರಿ ಮಳೆಯಿಂದಾಗಿ ಭೂ ಕುಸಿತ, ರಾ.ಹೆ.10 ಬಂದ್‌

ಪಿಟಿಐ
Published 6 ಸೆಪ್ಟೆಂಬರ್ 2021, 7:53 IST
Last Updated 6 ಸೆಪ್ಟೆಂಬರ್ 2021, 7:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗ್ಯಾಂಗ್ಟಕ್‌ : ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 10 ಬಂದ್‌ ಆಗಿದ್ದು, ಸಿಕ್ಕಿಂ ರಾಜ್ಯ ದೇಶದ ಇತರೆ ಭಾಗಗಳೊಂದಿಗೆ ಸಂರ್ಪಕ ಕಡಿತಗೊಂಡಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿರುವ ಪಶ್ಚಿಮ ಬಂಗಾಳದ ಕಾಲಿಪಾಂಗ್‌ನ 46 ಕಿ.ಮೀ ಉದ್ದದ ರಸ್ತೆಯನ್ನು ಬಾರ್ಡರ್‌ ರೋಡ್‌ ಆರ್ಗೈನೈಸೇಷನ್‌(ಬಿಆರ್‌ಒ) ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.

ರಾತ್ರಿ ಸಂಭವಿಸಿದ ಭೂಕುಸಿತದಿಂದ ರಸ್ತೆಯಲ್ಲಿ ಸುಮಾರು 70 ಮೀ. ಉದ್ದದವರೆಗೆ ಕಲ್ಲು ಮಣ್ಣು ರಾಶಿಯಾಗಿತ್ತು. ಅದನ್ನು ತೆರವುಗೊಳಿಸಿ, ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸ್ವಲ್ಪ ಸಮಯ ಹಿಡಿಯತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ADVERTISEMENT

ಪ್ರಸ್ತುತ, ಡಾರ್ಜಿಲಿಂಗ್ ಬೆಟ್ಟಗಳ ಮೂಲಕ ಹಾದುಹೋಗುವ ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.