ADVERTISEMENT

2020ರ ಅತಿದೊಡ್ಡ ಡ್ರಗ್ಸ್‌ ದಾಳಿ: ರಾಜಸ್ಥಾನದಲ್ಲಿ 234 ಕೆಜಿ ಅಫೀಮು ವಶ

ಏಜೆನ್ಸೀಸ್
Published 26 ಜುಲೈ 2020, 3:44 IST
Last Updated 26 ಜುಲೈ 2020, 3:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಮಾದಕವಸ್ತು ಜಾಲವನ್ನು ಭೇದಿಸಿರುವ ಕೇಂದ್ರ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 234 ಕೆಜಿ ಅಫೀಮು ವಶಪಡಿಸಿಕೊಂಡಿದ್ದಾರೆ.

ಜೋಧ್‌ಪುರ ವಲಯ ಘಟಕದ ತಂಡ ಆರ್‌.ಲಾಲ್‌ ಎಂಬುವರ ಮನೆ ಮೇಲೆ ದಾಳಿ ನಡೆಸಿ 234 ಕೆಜಿ ಅಫೀಮು ವಶಪಡಿಸಿಕೊಂಡಿದ್ದು, ಬಿಲ್ವಾರಾ ಜಿಲ್ಲೆಯ ಎಂ.ಕೆ.ಧಾಕಾಡ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಉಪನಿರ್ದೇಶಕ ಕೆ.ಪಿ.ಎಸ್‌.ಮಲ್ಹೋತ್ರಾ ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಕಾರುವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

‘ಅಫೀಮು ದಾಸ್ತಾನಿನ ಮೇಲೆ ನಡೆದ ದೇಶದ ಅತಿ ದೊಡ್ಡ ದಾಳಿ ಇದಾಗಿದೆ.ಚಿತ್ತೋರ್‌ಘರ್ ಜಿಲ್ಲೆಯಿಂದ ಜೋಧ್‌ಪುರಕ್ಕೆ ಅಫೀಮು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಶಕ್ಕೆ ಪಡೆದಿರುವ ಸರಕು ಮಧ್ಯಪ್ರದೇಶ ಮತ್ತು ರಾಜಸ್ಥಾನ ಮೂಲದ ಕಳ್ಳಸಾಗಣೆದಾರರಿಗೆ ಸೇರಿದಾಗಿದೆ’ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT