ADVERTISEMENT

ಯುಪಿಎ ಸರ್ಕಾರ ಸೇನೆಗೆ ಮುಕ್ತ ಅವಕಾಶ ನೀಡಿರಲಿಲ್ಲ: ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 10:57 IST
Last Updated 1 ಮಾರ್ಚ್ 2019, 10:57 IST
   

ಕನ್ಯಾಕುಮಾರಿ: ಯುಪಿಎ ಸರ್ಕಾರ ಸೇನೆಗೆ ಮುಕ್ತ ಅವಕಾಶವನ್ನು ನೀಡಿರಲಿಲ್ಲ, ಬಿಜೆಪಿ ಸರ್ಕಾರ ಉಗ್ರರ ವಿರುದ್ಧದ ಹೋರಾಟಕ್ಕೆ ಸೇನೆಗೆ ಮುಕ್ತ ಅವಕಾಶ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತೀಯ ವಾಯುಪಡೆಯ ಫೈಲಟ್‌ ಮತ್ತು ವಿಂಗ್‌ ಕಮಾಂಡರ್‌ ಅಭಿನಂದನ್‌ ತಮಿಳುನಾಡಿನವರು ಹಾಗೂ ದೇಶದ ಮೊದಲ ರಕ್ಷಣಾ ಸಚಿವರು ಸಹ ತಮಿಳುನಾಡಿನವರು ಎಂಬುದು ನಮ್ಮ ಹೆಮ್ಮೆ ಎಂದು ಹೇಳುವ ಮೂಲಕ ಮೋದಿ ಭಾಷಣ ಆರಂಭಿಸಿದರು.

ADVERTISEMENT

ಮುಂಬೈ ದಾಳಿಯ ಬಳಿಕ ಭಾರತೀಯ ಸೇನೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಅವಕಾಶ ಕೋರಿತ್ತು. ಆದರೆ ಅಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಗುಡುಗಿದರು. ನಾವು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಉಗ್ರರ ವಿರುದ್ಧ ಹೋರಾಡಲು ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ ಹಾಗೂ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟಕ್ಕೆ ಇಡೀ ವಿಶ್ವವೇ ಬೆಂಬಲಕ್ಕೆ ನಿಂತಿದೆ ಎಂದು ಮೋದಿ ಹೇಳಿದರು.

26/11ರ ಮುಂಬೈ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ಧ ಸರ್ಕಾರಕ್ರಮ ಕೈಗೊಳ್ಳಲಿದೆಎಂದು ದೇಶದ ಜನರು ಬಯಸಿದ್ದರುಆದರೆ ಸರ್ಕಾರ ಏನು ಮಾಡಲಿಲ್ಲ. ಉರಿ ಮತ್ತುಪುಲ್ವಾಮಾದಾಳಿಯ ಬಳಿಕ ನಮ್ಮ ಸೈನಿಕರ ಮಾಡಿದ ದಾಳಿಗಳು ಮತ್ತು ಅವರ ಧೈರ್ಯವನ್ನು ನೀವು ನೋಡಿದ್ದೀರಿ, ದೇಶ ಸೇವೆಯಲ್ಲಿರುವಆ ಯೋಧರಿಗೆ ನನ್ನ ನಮನಗಳು ಎಂದು ಮೋದಿ ಹೇಳಿದರು.

ವೇಗದ ತೇಜಸ್‌ ರೈಲು ಮೇಕಿನ್‌ ಇಂಡಿಯಾ ಯೋಜನೆ ಅಡಿಯಲ್ಲಿ ತಯಾರಾಗಿದೆ. ಇದು ಚೆನ್ನೈನಲ್ಲಿ ತಯಾರಾಗುತ್ತಿರುವುದು ಮತ್ತೊಂದು ಹೆಮ್ಮೆಯ ವಿಚಾರ. ಆಯುಷ್ಮಾನ್‌ ಭಾರತ ಯೋಜನೆ ಇಡೀ ವಿಶ್ವದಲ್ಲೇ ದೊಡ್ಡ ನಾಗರಿಕಯೋಜನೆಯಾಗಿದೆ ಎಂದರು. ಭಾರತ ತ್ವರಿತಗತಿಯಲ್ಲಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ ಎಂದರು.

30 ವರ್ಷಗಳ ಕಾಲ ಸಂಪೂರ್ಣ ಬಹುಮತದೊಂದಿಗೆಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಈ ದೇಶದ ಜನರ ನಂಬಿಕೆಯನ್ನು ಉಳಿಸಿಕೊಳ್ಳದೆಜನರ ಬದುಕನ್ನು ನಾಶ ಮಾಡಿತು ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದರು.

ಮೋದಿ ಭೇಟಿ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ ವ್ಯಾಪಕವಾಗಿಪೊಲೀಸ್‌ ಭದ್ರತೆಯನ್ನು ಮಾಡಲಾಗಿತ್ತು. ಇದೇ ವೇಳೆ ಅವರು ಮಧುರೈ– ಚೆನ್ನೈ ನಡುವಿನ ತೇಜ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.