ADVERTISEMENT

ಅಹಮದಾಬಾದ್‌ ವಿಮಾನ ದುರಂತ: ಪೈಲಟ್ ಸುಮೀತ್ ಅಂತ್ಯಸಂಸ್ಕಾರ

ಪಿಟಿಐ
Published 17 ಜೂನ್ 2025, 13:39 IST
Last Updated 17 ಜೂನ್ 2025, 13:39 IST
ಸುಮೀತ್ ಸಭರ್ವಾಲ್‌ ಅವರ ತಂದೆ ಪುಷ್ಕರಾಜ್ ಅವರು ಪಾರ್ಥಿವ ಶರೀರದ ಮುಂದೆ ನಿಂತು ಕಣ್ಣೀರು ಹಾಕಿದರು –ಪಿಟಿಐ ಚಿತ್ರ
ಸುಮೀತ್ ಸಭರ್ವಾಲ್‌ ಅವರ ತಂದೆ ಪುಷ್ಕರಾಜ್ ಅವರು ಪಾರ್ಥಿವ ಶರೀರದ ಮುಂದೆ ನಿಂತು ಕಣ್ಣೀರು ಹಾಕಿದರು –ಪಿಟಿಐ ಚಿತ್ರ   

ಮುಂಬೈ: ಅಹಮದಾಬಾದ್‌ನಲ್ಲಿ ಕಳೆದ ವಾರ ಪತನಗೊಂಡ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಸುಮೀತ್ ಸಭರ್ವಾಲ್‌ ಅವರ ಅಂತ್ಯಸಂಸ್ಕಾರವನ್ನು ಮಂಗಳವಾರ ಮುಂಬೈನಲ್ಲಿ ನೆರವೇರಿಸಲಾಯಿತು.

ಚಾಕಲಾದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮಸಂಸ್ಕಾರ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಸುಮೀತ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ ಅಹಮದಾಬಾದ್‌ನಿಂದ ಮುಂಬೈಗೆ ವಿಮಾನದ ಮೂಲಕ ಕೊಂಡೊಯ್ಯಲಾಗಿತ್ತು. ಸುಮೀತ್‌ ಅವರ ನಿವಾಸದ ಎದುರು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕುಟುಂಬಸ್ಥರು, ಬಂಧು–ಮಿತ್ರರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ಸಮೀತ್ ಅವರಿಗೆ 8200 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವವಿತ್ತು.

ಸುಮೀತ್ ಸಭರ್ವಾಲ್‌ ಅವರ ತಂದೆ ಪುಷ್ಕರಾಜ್ ಅವರು ಪಾರ್ಥಿವ ಶರೀರದ ಮುಂದೆ ಕುಳಿತು ಕಣ್ಣೀರು ಹಾಕಿದರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.