ADVERTISEMENT

ಲತಾ ಮಂಗೇಶ್ಕರ್‌ ಚಿತಾಭಸ್ಮ ರಾಮಕುಂಡದಲ್ಲಿ ವಿಸರ್ಜನೆ

ಪಿಟಿಐ
Published 10 ಫೆಬ್ರುವರಿ 2022, 14:05 IST
Last Updated 10 ಫೆಬ್ರುವರಿ 2022, 14:05 IST
ಲತಾ ಮಂಗೇಶ್ಕರ್‌
ಲತಾ ಮಂಗೇಶ್ಕರ್‌   

ನಾಸಿಕ್‌(ಮಹಾರಾಷ್ಟ್ರ): ಈಚೆಗೆ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಚಿತಾಭಸ್ಮವನ್ನು ಇಲ್ಲಿನ ಗೋದಾವರಿ ನದಿತೀರದ ಪವಿತ್ರ ರಾಮಕುಂಡದಲ್ಲಿ ಗುರುವಾರ ವಿಸರ್ಜಿಸಲಾಯಿತು.

ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್‌,ಸೋದರಳಿಯ ಆದಿನಾಥ ಮಂಗೇಶ್ಕರ್‌ ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.

ತಮ್ಮ ನೆಚ್ಚಿನ ಗಾಯಕಿಗೆ ಗೌರವ ಸಲ್ಲಿಸಲು ನಾಸಿಕ್‌ ನಿವಾಸಿಗಳು ನದಿ ದಡದಲ್ಲಿ ಸೇರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.