ADVERTISEMENT

ದಿ. ಜಯಂತ್ ನಾರ್ಳೀಕರ್‌ಗೆ ‘ವಿಜ್ಞಾನ ರತ್ನ’ ಪ್ರಶಸ್ತಿ

ಪಿಟಿಐ
Published 25 ಅಕ್ಟೋಬರ್ 2025, 16:20 IST
Last Updated 25 ಅಕ್ಟೋಬರ್ 2025, 16:20 IST
Jayant Naralikar
Jayant Naralikar   

ನವದೆಹಲಿ: ದೇಶದ ಹೆಸರಾಂತ ಖಭೌತ ವಿಜ್ಞಾನಿ, ಇತ್ತೀಚೆಗೆ ನಿಧನರಾದ ಜಯಂತ್ ನಾರ್ಳೀಕರ್‌ ಅವರನ್ನು ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರವಾದ ‘ವಿಜ್ಞಾನ ರತ್ನ ಪ್ರಶಸ್ತಿ’ಗೆ ಸರ್ಕಾರ ಆಯ್ಕೆ ಮಾಡಿದೆ.

ಜಯಂತ್ ನಾರ್ಳೀಕರ್‌ ಅವರು ಮೇ 20ರಂದು ತಮ್ಮ 86ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. 

ವಿಶ್ವವು ಮಹಾಸ್ಫೋಟದಿಂದ ಒಂದೇ ಕ್ಷಣದಲ್ಲಿ ಸೃಷ್ಟಿಯಾಯಿತು ಎಂಬ ಬಿಗ್‌ಬ್ಯಾಂಗ್ ಸಿದ್ಧಾಂತವನ್ನು  ಪ್ರಶ್ನಿಸಿದ್ದ ನಾರ್ಳೀಕರ್‌, ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು.   

ADVERTISEMENT

ನಾರ್ಳೀಕರ್‌ ಜತೆಗೆ ಇತರೆ ಎಂಟು ವಿಜ್ಞಾನಿಗಳನ್ನು ‘ವಿಜ್ಞಾನ್‌ ಶ್ರೀ ಪ್ರಶಸ್ತಿಗೆ’ ಸರ್ಕಾರ ಆಯ್ಕೆ ಮಾಡಿದೆ. ಜ್ಞಾನೇಂದ್ರ ಪ್ರತಾಪ್‌ಸಿಂಗ್‌ (ಕೃಷಿ ವಿಜ್ಞಾನ), ಯೂಸಫ್‌ ಮಹಮದ್‌ ಶೇಖ್ (ಅಣು ಶಕ್ತಿ), ಕೆ. ತಂಗರಾಜ್‌ (ಜೈವಿಕ ವಿಜ್ಞಾನ), ಪ್ರದೀಪ್‌ ತಲಪ್ಪಿಲ್‌ (ರಸಾಯನ ವಿಜ್ಞಾನ), ಅನಿರುದ್ಧ ಬಾಲಚಂದ್ರ ಪಂಡಿತ್‌ (ಎಂಜಿನಿಯರಿಂಗ್‌), ಎಸ್‌. ವೆಂಕಟ ಮೋಹನ್‌ (ಪರಿಸರ ವಿಜ್ಞಾನ), ಮಹಾನ್‌ ಎಂ.ಜೆ. (ಗಣಿತ ಮತ್ತು ಗಣಕ ವಿಜ್ಞಾನ) ಮತ್ತು ಜಯನ್‌ ಎಂ. (ಬಾಹ್ಯಾಕಾಶ ವಿಜ್ಞಾನ) ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳು. 

ಜಗದೀಶ್‌ ಗುಪ್ತಾ ಕೆ, ಸತ್ಯೇಂದ್ರ ಕುಮಾರ್‌ ಎಂ, ದೇವಾರ್ಕ್‌ ಸೇನ್‌ಗುಪ್ತಾ, ದೀಪಾ ಅಗಾಶೆ, ದಿವ್ಯೇಂದು ದಾಸ್‌, ವಾಲಿಯರ್‌ ರಹಮಾನ್‌, ಅರ್ಕಪ್ರವ ಬಸು, ಸವ್ಯಸಾಚಿ ಮುಖರ್ಜಿ, ಶ್ವೇತಾ ಪ್ರೇಮ್ ಅಗರ್‌ವಾಲ್‌, ಸುರೇಶ್‌ ಕಮಾರ್‌, ಅಮಿತ್‌ ಕುಮಾರ್‌ ಅಗರ್‌ವಾಲ್‌, ಸುರ್ಹುದ್‌ ಶ್ರೀಕಾಂತ್‌ ಮೋರೆ, ಅಂಕುರ್‌ ಗರ್ಗ್‌, ಮೋಹನಶಂಕರ ಶಿವಪ್ರಕಾಶಂ ಸೇರಿ 14 ಮಂದಿ ಯುವ ವಿಜ್ಞಾನಿಗಳು ‘ವಿಜ್ಞಾನ್‌ ಯುವ ಪ್ರಶಸ್ತಿಗೆ’ ಆಯ್ಕೆಯಾಗಿದ್ದಾರೆ. ವಿಜ್ಞಾನ ತಂಡ ಪ್ರಶಸ್ತಿಗೆ ‘ಸಿಎಸ್‌ಐಆರ್‌ ಅರೊಮಾ ಮಿಷನ್‌’ ಆಯ್ಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.