ADVERTISEMENT

ಇನ್‌ಸ್ಟಾಗ್ರಾಂ ಖಾತೆ ತೆರೆದ ಲತಾ ಮಂಗೇಶ್ಕರ್‌

ಪಿಟಿಐ
Published 1 ಅಕ್ಟೋಬರ್ 2019, 18:46 IST
Last Updated 1 ಅಕ್ಟೋಬರ್ 2019, 18:46 IST
.
.   

ಮುಂಬೈ: ಇತ್ತೀಚೆಗಷ್ಟೇ 90 ವರ್ಷಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು, ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾ‌ತೆ ತೆರೆ‌ದಿದ್ದಾರೆ.

ಸೋಮವಾರ ರಾತ್ರಿ ತಮ್ಮ ಫೋಟೊ ಮತ್ತು ವಿಡಿಯೊವೊಂದನ್ನು ಹಂಚಿಕೊಂಡಿರುವ ಲತಾ ಅವರು, ಟ್ವಿಟರ್‌ ಮೂಲಕ ಮೊದಲ ಬಾರಿಗೆ ಟ್ವೀಟ್ ಮಾಡಿ ಇನ್‌ಸ್ಟಾಗ್ರಾಂ ಲಿಂಕ್‌‌ಅನ್ನು ಹಂಚಿಕೊಂಡರು.

‘ನಮಸ್ಕಾರ. ಇಂದು ಮೊದಲ ಬಾರಿಗೆ ಇನ್‌ಸ್ಟಾಗ್ರಾಂನಲ್ಲಿ ನಂಟು ಬೆಸೆಯುತ್ತಿರುವೆ’ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ತಂಗಿ ಮೀನಾ ಖಾದಿಕರ್ ಬರೆದಿರುವ ‘ದೀದಿ ಔರ್ ಮೇ’ ಶೀರ್ಷಿಕೆಯ ಆತ್ಮಚರಿತ್ರೆ ಪುಸ್ತಕವನ್ನು ಹಿಡಿದುಕೊಂಡಿರುವ ಫೋಟೊವನ್ನು ಲತಾ ಹಂಚಿಕೊಂಡಿದ್ದಾರೆ. ಈ ಪುಸ್ತಕ ಸೆ. 29ರಂದು ಬಿಡುಗಡೆಯಾಗಿದೆ.

ADVERTISEMENT

ಸಹೋದರಿಯರಾದ ಮೀನಾ ಮತ್ತು ಉಷಾ ಮಂಗೇಶ್ಕರ್, ಲತಾ ಅವರ ಆತ್ಮಚರಿತ್ರೆ ಪುಸ್ತಕ ಹಿಡಿದುಕೊಂಡಿರುವ ಮತ್ತೊಂದು ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ‘ನಿನ್ನೆ ನನ್ನ ಕಿರಿಯ ತಂಗಿ ಮೀನಾ ಖಾದಿಕರ್ ನನಗೆ ಕೃತಿಯ ಮೊದಲ ಪ್ರತಿಯನ್ನು ಕೊಡುಗೆಯಾಗಿ ನೀಡಿದಳು. ಅವಳು ನನ್ನ ಬಗ್ಗೆ ಪುಸ್ತಕ ಬರೆದಿದ್ದಾಳೆ’ ಎಂದು ಪುಟ್ಟ ಒಕ್ಕಣೆಯನ್ನೂ ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.