ADVERTISEMENT

ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಸ್ಥಳಾಂತರ ಅರ್ಜಿ ವಿಚಾರಣೆ ಜುಲೈ 20ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 11:22 IST
Last Updated 21 ಮೇ 2022, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ (ಉತ್ತರಪ್ರದೇಶ):ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಕಟ್ರಾ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದಶಾಹಿ ಮಸೀದಿಈದ್ಗಾ ಸ್ಥಳಾಂತರಿಸಲು ಕೋರಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಇಲ್ಲಿನ ತ್ವರಿತಗತಿ ನ್ಯಾಯಾಲಯ ಜುಲೈ 20ಕ್ಕೆ ನಿಗದಿಪಡಿಸಿದೆ.

ನಾಗಾಬಾಬಾ ಅವರ ಶಿಷ್ಯರಾದ ಗೋಪಾಲ್ ಬಾಬಾ ಅವರು ಕಳೆದ ವರ್ಷ ಈ ಅರ್ಜಿ ಸಲ್ಲಿಸಿದ್ದರು.ಉತ್ತರ ಪ್ರದೇಶದ ಬಾರ್ ಕೌನ್ಸಿಲ್ ಶುಕ್ರವಾರ ನೀಡಿದ ‘ನೋ ವರ್ಕ್’ ಕರೆಯಿಂದಾಗಿ, ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಜುಲೈ 20ಕ್ಕೆ ಮುಂದೂಡಿದೆ ಎಂದು ಅರ್ಜಿದಾರರ ವಕೀಲ ದೀಪಕ್ ಶರ್ಮಾ ತಿಳಿಸಿದರು.

ಶ್ರೀಕೃಷ್ಣನ ಅನುಯಾಯಿ ‌ಎಂದು ಹೇಳಿಕೊಂಡಿರುವ ಗೋಪಾಲ್ ಬಾಬಾ ಅವರು ಕಟ್ರಾ ಕೇಶವ ದೇವ ದೇವಸ್ಥಾನದ 13.37 ಎಕರೆ ಜಾಗದಲ್ಲಿ ಇರುವ ಶಾಹಿ ಮಸೀದಿಈದ್ಗಾ ಸ್ಥಳಾಂತರಿಸಲು ಕೋರಿ 2021ರಸೆಪ್ಟೆಂಬರ್ 20ರಂದು ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ADVERTISEMENT

ಮಥುರಾ ಜಿಲ್ಲಾ ನ್ಯಾಯಾಧೀಶರ ಆದೇಶದ ಮೇರೆಗೆ ಈ ಮೊಕದ್ದಮೆಯನ್ನು ನಂತರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ (ತ್ವರಿತ ನ್ಯಾಯಾಲಯ) ನೀರಜ್ ಗೌಂಡ್ ಅವರಿಗೆ ವರ್ಗಾಯಿಸಲಾಗಿತ್ತು ಎಂದು ಶರ್ಮಾ ಹೇಳಿದರು.

ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಇಂತೇಜಾಮಿಯಾ ಸಮಿತಿ, ಶಾಹಿ ಮಸೀದಿ ಈದ್ಗಾ, ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ಈ ಮೊಕದ್ದಮೆಯಲ್ಲಿ ಪ್ರತಿವಾದಿಗಳು. ಶಾಹಿ ಮಸೀದಿ ಈದ್ಗಾ ಸ್ಥಳಾಂತರ ಕೋರಿ ಈವರೆಗೆಮಥುರಾದ ವಿವಿಧ ನ್ಯಾಯಾಲಯಗಳಲ್ಲಿ 11 ಮೊಕದ್ದಮೆಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.