ADVERTISEMENT

ಕಲ್ಕತ್ತ ಹೈಕೋರ್ಟ್‌ಗೆ ನ್ಯಾ. ದಿನೇಶ್‌ ವರ್ಗಾವಣೆಗೆ ವಕೀಲರ ವಿರೋಧ

ಪಿಟಿಐ
Published 2 ಏಪ್ರಿಲ್ 2025, 15:49 IST
Last Updated 2 ಏಪ್ರಿಲ್ 2025, 15:49 IST
<div class="paragraphs"><p>ಕಲ್ಕತ್ತ ಹೈಕೋರ್ಟ್‌</p></div>

ಕಲ್ಕತ್ತ ಹೈಕೋರ್ಟ್‌

   

ಕೋಲ್ಕತ್ತ: ನ್ಯಾಯಮೂರ್ತಿ ದಿನೇಶ್‌ ಕುಮಾರ್ ಶರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಕಲ್ಕತ್ತ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದನ್ನು ಇಲ್ಲಿನ ವಕೀಲರ ಸಂಘಗಳು ವಿರೋಧಿಸಿವೆ. ನ್ಯಾಯಮೂರ್ತಿಯ ಪ್ರಮಾಣ ವಚನ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿವೆ.

‘ದೇಶದಲ್ಲಿಯೇ ಅತ್ಯಂತ ಹಳೆಯ ನ್ಯಾಯಾಲಯ ಇದಾಗಿದೆ. ಈ ಹೈಕೋರ್ಟ್‌ಗೆ ಪ್ರಶ್ನಾರ್ಹ ವ್ಯಕ್ತಿತ್ವ ಇರುವ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಯಾಗಿ ಬರುವುದು ಸ್ವೀಕಾರಾರ್ಹವಲ್ಲ’ ಎಂದು ವಕೀಲರು ಹೇಳಿದ್ದಾರೆ.

ADVERTISEMENT

ನ್ಯಾಯಮೂರ್ತಿ ದಿನೇಶ್‌ ಅವರು ನಿರ್ವಹಿಸುವ ಯಾವ ವಿಚಾರಣೆಯಲ್ಲಿಯೂ ನಾವು ಭಾಗವಹಿಸುವುದಿಲ್ಲ ಎಂದಿರುವ ವಕೀಲರು, ‘ಹೆಚ್ಚುವರಿ ಸಾಲಿಸಿಟರಲ್‌ ಜನರಲ್‌ ಹಾಗೂ ಅಡ್ವೊಕೇಟ್‌ ಜನರಲ್‌ ಅವರು ಕೂಡ ವಾದ ಮಂಡಿಸಬಾರದು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.