ರಾಹುಲ್ ಗಾಂಧಿ
– ಪಿಟಿಐ ಚಿತ್ರ
ನವದೆಹಲಿ: ದೇಶದ ಜನರ ಸಮಸ್ಯೆಗಳ ಪರ ಸಂಸತ್ತಿನಲ್ಲಿ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ಜನರಿಗೆ ಅವರ ಹಕ್ಕುಗಳು ಮತ್ತು ನ್ಯಾಯ ಸಿಗುವವರೆಗೆ ನಾನು ಇದನ್ನು ನಿಲ್ಲಿಸುವುದಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ತಮ್ಮ ವಾಟ್ಸ್‌ಆ್ಯಪ್ ಚಾನಲ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು, ‘ವಿರೋಧ ಪಕ್ಷದ ನಾಯಕ ಎಂದರೆ ಕೇವಲ ಹುದ್ದೆಯಲ್ಲ’ ಎಂದು ಹೇಳಿದ್ದಾರೆ. ಜತೆಗೆ ವಿವಿಧ ಸಂಘಗಳೊಂದಿಗೆ ಸಭೆ ನಡೆಸಿರುವ ವಿಡಿಯೊ ಹಂಚಿಕೊಂಡಿದ್ದಾರೆ.
‘ನನಗೆ, ವಿರೋಧ ಪಕ್ಷದ ನಾಯಕ ಎಂಬುದು ಕೇವಲ ಹುದ್ದೆಯಲ್ಲ. ದೇಶದ ಜನರ ಸಮಸ್ಯೆಗಳನ್ನು ಅರಿತು, ಅವುಗಳ ಪರ ಸಂಸತ್ತಿನಲ್ಲಿ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ದೇಶದ ಜನರಿಗೆ ಅವರ ಹಕ್ಕುಗಳು ಮತ್ತು ನ್ಯಾಯ ಸಿಗುವವರೆಗೆ ನಾನು ಇದನ್ನು ನಿಲ್ಲಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಜುಲೈ 1ರಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೊ ತುಣುಕು, ಹಾಥರಸ್ ಕಾಲ್ತುಳಿತದ ಸಂತ್ರಸ್ತರೊಂದಿಗಿನ ಸಭೆ, ಭಾರತೀಯ ರೈಲ್ವೆ ಲೋಕೊ ಪೈಲಟ್‌ಗಳೊಂದಿಗಿನ ಸಭೆ, ಸಂರ್ಘಷ ಪೀಡಿತ ಮಣಿಪುರದ ಸಂತ್ರಸ್ತರ ಭೇಟಿ ದೃಶ್ಯಗಳನ್ನು ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.