
ಲಖನೌ: ‘ಸದಾ ಕುತೂಹಲದಿಂದ ಇರಿ, ಕಲಿಯುವುದನ್ನು ನಿಲ್ಲಿಸಬೇಡಿ, ಯಾವುದೇ ಅಭಿಪ್ರಾಯವಿರಲಿ ಅದನ್ನು ಪ್ರಶ್ನಿಸಿ– ವಕೀಲಿಕೆ ಬಗ್ಗೆ ತೀವ್ರ ಹಂಬಲ ಇರುವವರನ್ನೂ ಮತ್ತು ಇದೊಂದು ಜೀವನೋಪಾಯ ಎಂದುಕೊಂಡವರನ್ನೂ ಈ ಗುಣಗಳೇ ಪ್ರತ್ಯೇಕಿಸುತ್ತವೆ’ ಎಂದು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾ. ಸೂರ್ಯ ಕಾಂತ್ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಡಾ. ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಭಾನುವಾರ ಮಾತನಾಡಿದರು. ಸಹೋದರರ ಆಸ್ತಿ ವಿವಾದ ಸಂಬಂಧದ ಪ್ರಕರಣವೊಂದರಿಂದ ತಾವು ಕಲಿತ ಪಾಠವೊಂದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.
‘ನನಗೆ ನನ್ನ ನಿರ್ಧಾರದ ಬಗ್ಗೆ ಅತೀವ ನಂಬಿಕೆ ಇತ್ತು. ಅಂತಾದರೂ ನಾನು ನನ್ನದೇ ತೀರ್ಪಿನ ಕರಡನ್ನು ಮತ್ತೊಮ್ಮೆ ಪರಿಶೀಲಿಸಲು ಹಿಂಜರಿಯಲಿಲ್ಲ. ಮುಂದೇನು ಎನ್ನುವುದು ತೋಚದಿದ್ದಾಗ, ವಿಚಾರಣೆ ಸಂದರ್ಭದಲ್ಲಿ ನಾನು ಕೆಲವು ಗಂಭೀರ ಪ್ರಶ್ನೆಗಳನ್ನು ಕಡೆಗಣಿಸಿದ್ದೆ. ಈ ಸೋಲೇ ನನಗೆ ಪಾಠವಾಯಿತು. ಎಲ್ಲವನ್ನೂ ಮತ್ತೊಮ್ಮೆ ಹೊಸದಾಗಿ ಆರಂಭಿಸಿದೆ. ಇದೇ ನನಗೆ ಜೀವನಪಾಠವಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.