ADVERTISEMENT

ಶ್ರೀನಗರ: 6 ಮಂದಿ ಎಲ್‌ಇಟಿ ಸಹಚರರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 14:31 IST
Last Updated 18 ಮಾರ್ಚ್ 2022, 14:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶುಕ್ರವಾರ ನಿಷೇಧಿತ ಸಂಘಟನೆ ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇಧಿಸಿದ್ದು, ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ.

ಪುಲ್ವಾಮದ ಲೆಲ್ಹರ್ ಕಾಕಪೋರಾ ನಿವಾಸಿ ರೂಫ್‌ ಅಹ್ಮದ್‌ ಲೋನ್‌, ಆಲೋಚಿಬಾಗ್‌ ಪಾಂಪೊರೆ ನಿವಾಸಿ ಆಕಿಬ್‌ ಮಕ್ಬೂಲ್‌ ಭಟ್‌, ಲಾರ್ವೆ ಕಾಕಪೋರಾ ನಿವಾಸಿಗಳಾದ ಜಾವೇದ್‌ ಅಹ್ಮದ್‌ ದಾರ್‌,ಸಜಾದ್‌ ಅಹ್ಮದ್‌ ದಾರ್‌, ಪುಲ್ವಾಮದ ಪರಿಗಾಮ್‌ ನಿವಾಸಿಗಳಾದ ಅರ್ಷಿದ್‌ ಅಹ್ಮದ್‌ ಮಿರ್‌, ರಮೀಜ್‌ ರಾಜಾ ಬಂಧಿತರು.

‘ಬಂಧಿತ ಸಹಚರರು ಉಗ್ರರಿಗೆ ಆಶ್ರಯ, ಸಾಗಣೆ, ಹಣಕಾಸು ನಿರ್ವಹಣೆ ಹಾಗೂ ವರ್ಗಾವಣೆ ಮಾಡುತ್ತಿದ್ದಲ್ಲದೇ ಯುವ ಸಮೂಹವನ್ನು ಉಗ್ರ ಚಟುವಟಿಕೆಗೆ ಸೆಳೆಯುವ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎಲ್‌ಇಟಿಯ ಕಮಾಂಡರ್‌ ರಿಯಾಜ್ ಅಹ್ಮದ್‌ ದಾರ್‌ ನಿರ್ದೇಶನದಂತೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬುದು ತನಿಖೆ ವೇಳೆ ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.