ADVERTISEMENT

ಕೋಮುವಾದ, ಲಿಂಗತಾರತಮ್ಯ ನಿವಾರಣೆಗೆ ಪಣ: ವೆಂಕಯ್ಯನಾಯ್ಡು ಒತ್ತಾಯ

ಕ್ವಿಟ್‌ ಇಂಡಿಯಾ ಚಳವಳಿಯ 79ನೇ ವಾರ್ಷಿಕೋತ್ಸವ

ಪಿಟಿಐ
Published 9 ಆಗಸ್ಟ್ 2021, 7:04 IST
Last Updated 9 ಆಗಸ್ಟ್ 2021, 7:04 IST
ಎಂ. ವೆಂಕಯ್ಯ ನಾಯ್ಡು
ಎಂ. ವೆಂಕಯ್ಯ ನಾಯ್ಡು   

ನವದೆಹಲಿ: ‘ಜಾತೀಯತೆ, ಕೋಮುವಾದ ಮತ್ತು ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಾವು ಶ್ರಮಿಸೋಣ.ಈ ಮೂಲಕ ಸಂಪೂರ್ಣ ಮತ್ತು ಹೆಚ್ಚು ಆತ್ಮವಿಶ್ವಾಸದ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ದಾಪುಗಾಲು ಹಾಕೋಣ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಹೇಳಿದ್ದಾರೆ.

ಕ್ವಿಟ್‌ ಇಂಡಿಯಾ ಚಳವಳಿಯ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) 79ನೇ ವಾರ್ಷಿಕೋತ್ಸವದ ನಿಮಿತ್ತ ಟ್ವೀಟ್‌ ಮಾಡಿರುವ ಅವರು, ‘ನಮ್ಮ ಮಾತೃಭೂಮಿಯನ್ನು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಗೊಳಿಸಲು ಚಳವಳಿಯಲ್ಲಿ ಭಾಗವಹಿಸಿದ ಭಾರತದ ವೀರ ಮಕ್ಕಳ ತ್ಯಾಗವನ್ನು ಸದಾ ಸ್ಮರಿಸೋಣ’ ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ‘ಬ್ರಿಟಷರೇ ಭಾರತ ಬಿಟ್ಟು ತೊಲಗಿ‘ ಚಳವಳಿಯನ್ನು 1942ರಲ್ಲಿ ಆರಂಭಿಸಲಾಯಿತು. ಈ ಆಂದೋಲನದ ಐದು ವರ್ಷಗಳ ನಂತರ (ಆಗಸ್ಟ್ 15, 1947) ಭಾರತ, ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆಯಿತು. ಈ ಚಳುವಳಿಯು ವಸಾಹತುಶಾಹಿ ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.