ADVERTISEMENT

ಒಡಿಶಾ: ಪೊಲೀಸ್‌ ಅಧಿಕಾರಿಗಳಿಂದ ಹಿಂದೂ ಸಂಪ್ರದಾಯದಂತೆ ಕೋತಿಯ ಅಂತ್ಯಸಂಸ್ಕಾರ

ಪಿಟಿಐ
Published 26 ಆಗಸ್ಟ್ 2021, 7:51 IST
Last Updated 26 ಆಗಸ್ಟ್ 2021, 7:51 IST
ಕೋತಿ–ಸಾಂದರ್ಭಿಕ ಚಿತ್ರ
ಕೋತಿ–ಸಾಂದರ್ಭಿಕ ಚಿತ್ರ   

ಜಾಜ್‌ಪುರ: ಮೃತ ಕೋತಿಯ ಅಂತಿಮ ಸಂಸ್ಕಾರವನ್ನು ಪೊಲೀಸ್‌ ಅಧಿಕಾರಿಗಳು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

‘ಬಲಿಚಂದ್ರಾಪುರ ಪೊಲೀಸ್‌ ಠಾಣೆಯ ಆವರಣದಲ್ಲಿರುವ ಮರದಲ್ಲಿ ಕೋತಿ ವಾಸವಾಗಿತ್ತು. ಅದರೊಂದಿಗೆ ಠಾಣೆಯ ಸಿಬ್ಬಂದಿ ಆತ್ಮೀಯತೆ ಹೊಂದಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮಂಗನಿಗೆ ವಯಸ್ಸಾಗಿತ್ತು ಮತ್ತು ಅನಾರೋಗ್ಯದಿಂದ ಬಳಲುತ್ತಿತ್ತು. ಮಂಗಳವಾರ ಅದರ ಮೃತದೇಹ ಸಿಕ್ಕಿದೆ. ನಮ್ಮ ಠಾಣೆಯ ಸಿಬ್ಬಂದಿಯು ಅದರೊಂದಿಗೆ ಆತ್ಮೀಯತೆ ಹೊಂದಿದ್ದರು. ಅದು ನಮ್ಮ ಕುಟುಂಬದ ಭಾಗವಾಗಿತ್ತು. ಅದರ ಸಾವಿನಿಂದ ನಮಗೆ ಆಘಾತವಾಗಿದೆ. ಹಾಗಾಗಿ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬದಲು ನಾವೇ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಿದೆವು’ ಎಂದು ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್‌ ಬಿಜಯಿನಿ ಮಲ್ಹಾ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.