ADVERTISEMENT

ಸಹ ಜೀವನದಲ್ಲಿ ವಿರಸ: ಗೆಳೆಯನಿಂದ ಇರಿದು ಮಹಿಳೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 20:39 IST
Last Updated 2 ಡಿಸೆಂಬರ್ 2022, 20:39 IST
   

ನವದೆಹಲಿ: 35 ವರ್ಷದ ಮಹಿಳೆಯನ್ನು ಆಕೆಯ ಸಹ ಜೀವನ ಗೆಳೆಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾದ ಘಟನೆ ಶುಕ್ರವಾರ ಪಶ್ಚಿಮ ದೆಹಲಿಯ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೇಖಾರಾಣಿ ಮೃತಳು. ಇರಿತದ ಗಾಯಗಳೊಂದಿಗೆ ಆಕೆಯ ಶವ ಗಣೇಶನಗರದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

ಕೊಲೆ ಆರೋಪದ ಮೇಲೆ ಆಕೆಯ ಗೆಳೆಯ ಮನ್‌ಪ್ರೀತ್‌ ಸೀಂ‌ಗ್‌ (45) ಎಂಬವನನ್ನು ಪೊಲೀಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

ADVERTISEMENT

ರೇಖಾರಾಣಿ ಮಗಳೊಂದಿಗೆ ವಾಸವಿದ್ದರು. 2015ರಲ್ಲಿ ಸಿಂಗ್ ಪರಿಚಿತನಾಗಿದ್ದ. ಒಟ್ಟಿಗೆ ವಾಸವಿದ್ದರು. ಈಚೆಗೆ ಸಂಬಂಧ ಹಳಸಿದ್ದು ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ‍ಪುತ್ರಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.