ADVERTISEMENT

ಗಡಿಯಲ್ಲಿ ಅನುಮಾನಾಸ್ಪದ ಚಲನವಲನ: ಕಾಶ್ಮೀರದ ಪೂಂಛ್‌ನಲ್ಲಿ ಶೋಧ ಕಾರ್ಯಾಚರಣೆ

ಪಿಟಿಐ
Published 24 ಜೂನ್ 2025, 9:03 IST
Last Updated 24 ಜೂನ್ 2025, 9:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೆಂಧರ್/ಜಮ್ಮು: ಜಮ್ಮು– ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಭದ್ರತಾ ಪಡೆಗಳು ಮಂಗಳವಾರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಅನುಮಾನಾಸ್ಪದ ಚಲನವಲನದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ, ಸುರಂಕೋಟ್ ಮತ್ತು ಮೆಂಧರ್‌ನ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಹಾಗೂ ಸಿಆರ್‌ಪಿಎಫ್‌ ಜಂಟಿಯಾಗಿ ಶೋಧ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುರಂಕೋಟ್‌ನ ಸಾರಿ, ಉಸ್ತಾನ್, ಪಠಾಣ್‌ಖೋರ್, ಲೋಹರ್ ಮೊಹಲ್ಲಾ, ಚಂಡಿಮಾರ್, ಫಾಗಲ್, ಹರಿ ಟಾಪ್ ಮತ್ತು ಕಾಗ್ವಾಲಿ, ಲಿಂಬಾ ಹಾಗೂ ಮೆಂಧರ್‌ನ ಉಚ್ಚಾದ್ ಮತ್ತು ಕಲ್ಲರ್-ಗುರ್ಸೈಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶದೊಳಗೆ ಅಕ್ರಮವಾಗಿ ನುಸುಳಿ, ದಟ್ಟಡವಿಯಲ್ಲಿ ಅಡಗಿರುವ ಭಯೋತ್ಪಾದಕರನ್ನು ಸದೆಬಡಿಯಲು ‌‌ಭದ್ರತಾ ಪಡೆಗಳು ಜಮ್ಮುವಿನಾದ್ಯಂತ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.