ADVERTISEMENT

ಕೇರಳದಲ್ಲಿ ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ16ರವರೆಗೆ ಲಾಕ್‌ಡೌನ್

​ಪ್ರಜಾವಾಣಿ ವಾರ್ತೆ
Published 6 ಮೇ 2021, 7:04 IST
Last Updated 6 ಮೇ 2021, 7:04 IST
ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಸಿಎಂ ಪಿಣರಾಯಿ ವಿಜಯನ್   

ತಿರುವನಂತಪುರ: ಕೋವಿಡ್ ಪ್ರಕರಣಗಳು ವಿಪರೀತಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಕೇರಳ ಸರ್ಕಾರವುಲಾಕ್‌ಡೌನ್‌ ಹೇರಿಕೆಗೆ ನಿರ್ಧರಿಸಿದೆ.

ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ16ರವರೆಗೆ ಕೇರಳ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುತ್ತಿರುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ ಎಂದುಎಎನ್‌ಐ ತಿಳಿಸಿದೆ.

ಬುಧವಾರ ಕೇರಳ 41,953 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಇದುವರೆಗಿನ ದೈನಂದಿನ ದಾಖಲೆಯಾಗಿದೆ.

ADVERTISEMENT

ಲಾಕ್‌ಡೌನ್ ವೇಳೆ ಯಾವುದಕ್ಕೆಲ್ಲ ವಿನಾಯತಿ ಇರಲಿದೆ ಎಂಬುದು ಮಾರ್ಗಸೂಚಿಯಲ್ಲಿ ತಿಳಿದು ಬರಲಿದೆ.

ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.