ADVERTISEMENT

ಬಿಹಾರದಲ್ಲಿ ಆರ್‌ಜೆಡಿ 20, ಕಾಂಗ್ರೆಸ್‌ 9, ಸಿಪಿಐ(ಎಂ) 5 ಸ್ಥಾನಗಳಲ್ಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 11:38 IST
Last Updated 22 ಮಾರ್ಚ್ 2019, 11:38 IST
   

ಪಟ್ನಾ: ಬಿಹಾರದಲ್ಲಿ ಕಾಂಗ್ರೆಸ್‌ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಡುವಿನ ಮೈತ್ರಿ ಯಶಸ್ವಿಯಾಗಿದ್ದುಆರ್‌ಜೆಡಿ 20 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.

ಉಳಿದ ಸ್ಥಾನಗಳನ್ನು ಉಭಯ ಪಕ್ಷಗಳು ಇತರೆ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿವೆ.

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳನ್ನು ಸೋಲಿಸಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬಿಹಾರದ ಕೆಲವು ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿರುವಸಣ್ಣ ಪುಟ್ಟ ಪಕ್ಷಗಳ ಜತೆ ಮೈತ್ರಿ ಕೊಂಡಿವೆ. ಈ ಮೈತ್ರಿಕೂಟಕ್ಕೆ ಮಹಾಘಟಬಂಧನ ಎಂದು ಕರೆಯಲಾಗಿದೆ.

ADVERTISEMENT

ಆರ್‌ಜೆಡಿ 20, ಕಾಂಗ್ರೆಸ್‌ 9, ಆರ್‌ಎಲ್‌ಎಸ್‌ಪಿ5, ಮಾಜಿ ಮುಖ್ಯಮಂತ್ರಿ ಜತಿನ್‌ ರಾಮ್‌ ಮಾಂಝಿ ನೇತೃತ್ವದ ಅವಾಮ್‌ ಮೊರ್ಚಾ 3 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಸಿಪಿಐ (ಎಂ)ಗೂ ಐದು ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.