ನವದೆಹಲಿ: ಈ ವರ್ಷದ ಮೇ ಅಂತ್ಯಕ್ಕೆ 480 ದೂರುಗಳನ್ನು ಲೋಕಪಾಲ ವಿಲೇವಾರಿ ಮಾಡಿದೆ.
ಇವುಗಳಲ್ಲಿ ಕೆಲವು ಭ್ರಷ್ಟಾಚಾರಕ್ಕೆ ಸಂಬಂಧಪಡದ ದೂರುಗಳಿವೆ. ನಾಗರಿಕರು ಭ್ರಷ್ಟಾಚಾರಕ್ಕೆ ಸಂಬಂಧಪಡದ ದೂರುಗಳನ್ನು ಸಲ್ಲಿಸಬಾರದು. ಈ ಬಗ್ಗೆ ಮಾಹಿತಿ ನೀಡುವ ಪ್ರಯತ್ನವನ್ನು ಸಹ ಲೋಕಪಾಲ ಮಾಡಿದೆ. ಲೋಕಪಾಲಕ್ಕೆ ದೂರು ಸಲ್ಲಿಸುವ ಸಂಬಂಧ ಅರ್ಜಿಯ ನಮೂನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಪಾಲ ವಿಚಾರಣೆ ನಡೆಸುತ್ತದೆ. ಪಿಂಚಣಿ, ಸೇವೆಗೆ ಸಂಬಂಧಿಸಿದ ವಿಷಯಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆಗಳಿಗೆ ದೂರು ನೀಡಬೇಕೇ ಹೊರತು ಲೋಕಪಾಲಕ್ಕೆ ಅಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ ಮಾತ್ರ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.