
ನವದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ದಾಖಲಿಸಿದ್ದ ದೂರನ್ನು ಲೋಕಪಾಲ್ ರದ್ದುಗೊಳಿಸಿದೆ. ದುಬೆ ವಿರುದ್ಧದ ಆರೋಪಗಳು ಅಪ್ರಯೋಜಕವಾದುದು ಎಂದು 134 ಪುಟಗಳ ಆದೇಶದಲ್ಲಿ ಹೇಳಿದೆ.
ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ದುಬೆ ವಿರುದ್ಧ ದೂರು ನೀಡಿದ್ದು, ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಠಾಕೂರ್ ವಿಫಲರಾಗಿದ್ದಾರೆ. ಜವಾಬ್ದಾರಿಯುತ ಸಾರ್ವಜನಿಕ ಸೇವಕನ ವಿರುದ್ಧ ಹುಡುಗಾಟದಂತೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಪಾಲ್ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಹೇಳಿದ್ದಾರೆ.
ಆಜಾದ್ ಅಧಿಕಾರ್ ಸೇನಾ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷರೂ ಆಗಿರುವ ಅಮಿತಾಭ್ ಠಾಕೂರ್ ಅವರು, 2009, 2014, 2019 ಮತ್ತು 2024ರ ಚುನಾವಣೆ ಸಂದರ್ಭದಲ್ಲಿ ದುಬೆ ಅವರು ಸಲ್ಲಿಸಿದ್ದ ಅಫಿಡವಿಟ್‌ಗಳನ್ನು ಆಧರಿಸಿ ಲೋಕಪಾಲ್‌ಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.