ADVERTISEMENT

ಲೋಕಸಭೆ: ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ ಅಂಗೀಕಾರ

ಪಿಟಿಐ
Published 5 ಡಿಸೆಂಬರ್ 2025, 15:50 IST
Last Updated 5 ಡಿಸೆಂಬರ್ 2025, 15:50 IST
<div class="paragraphs"><p>ಲೋಕಸಭೆ (ಸಾಂಕೇತಿಕ ಚಿತ್ರ)</p></div>

ಲೋಕಸಭೆ (ಸಾಂಕೇತಿಕ ಚಿತ್ರ)

   

ನವದೆಹಲಿ: ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗಿರುವ ಪಾನ್‌ ಮಸಾಲಾದಂತಹ ಸರಕುಗಳ ಮೇಲೆ ಸೆಸ್‌ ವಿಧಿಸಲು ಅವಕಾಶ ನೀಡುವ ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ–2025’ ಅನ್ನು ಶುಕ್ರವಾರ ಲೋಕಸಭೆಯು ಅಂಗೀಕರಿಸಿತು.

‘ಈ ಸೆಸ್‌ನಿಂದ ಬರುವ ಆದಾಯವನ್ನು ಆರೋಗ್ಯ ಯೋಜನೆಗಳಿಗೆ ಖರ್ಚು ಮಾಡಲು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ADVERTISEMENT

‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025’ರ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಎರಡು ಪ್ರಮುಖ ಕ್ಷೇತ್ರಗಳಾದ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಸಂಪನ್ಮೂಲ ಒದಗಿಸುವ ಮಹತ್ವದ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಅವರು ಹೇಳಿದರು. 

ಚರ್ಚೆಯ ನಂತರ ಲೋಕಸಭೆಯು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತು.

ಮಸೂದೆಯು, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ವಿಭಾಗಗಳಿಗೆ ವ್ಯಯಿಸುವ ವೆಚ್ಚಗಳ ಪೂರೈಕೆಗೆ ಅಗತ್ಯವಾದ ಸಂಪನ್ಮೂಲಗಳನ್ನು ವೃದ್ಧಿಸುತ್ತದೆ. ಇದರಲ್ಲಿ ಪಾನ್‌ ಮಸಾಲಾ ಮತ್ತು ಅಂತಹ ಸರಕುಗಳನ್ನು ತಯಾರಿಸಲು ಅಳವಡಿಸಿರುವ ಯಂತ್ರಗಳು ಅಥವಾ ಇತರ ಪ್ರಕ್ರಿಯೆಗಳ ಮೇಲೆ ಸೆಸ್ ವಿಧಿಸಲಾಗುತ್ತದೆ.

’ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಪಾನ್ ಮಸಾಲಾವನ್ನು ಅದರ ಬಳಕೆಯ ಆಧಾರದ ಮೇಲೆ ಗರಿಷ್ಠ ಶೇ 40ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಈಗ ವಿಧಿಸುವ‌ ಸೆಸ್‌ನಿಂದ ಜಿಎಸ್‌ಟಿ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.