ADVERTISEMENT

ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಲಖನೌ ಸೇರ್ಪಡೆ

ಪಿಟಿಐ
Published 1 ನವೆಂಬರ್ 2025, 13:36 IST
Last Updated 1 ನವೆಂಬರ್ 2025, 13:36 IST
.
.   

ಲಖನೌ: ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ (ಸಿಎನ್‌ಎನ್‌) ಉತ್ತರಪ್ರದೇಶದ ರಾಜಧಾನಿ ಲಖನೌ ನಗರ ಸೇರ್ಪಡೆಯಾಗಿದೆ.

ಲಖನೌ ನಗರವು ‘ವೈವಿಧ್ಯಮಯ ಪಾಕಶಾಲೆ’ ವಿಭಾಗದಲ್ಲಿ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಇಲ್ಲಿನ ಗಲೌಟಿ ಕಬಾಬ್‌, ಅವಧಿ ಬಿರಿಯಾಣಿ, ಗೋಲ್‌ಗಪ್ಪಾ ಮತ್ತು ಮಖಾನ್‌ ಮಲಾಯ್‌ ಬಾಯಲ್ಲಿ ನೀರೂರಿಸುತ್ತವೆ ಎಂದು ವಿಶ್ವಸಂಸ್ಥೆಯ ಭಾರತೀಯ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. 

‘ಸಿಎನ್‌ಎನ್‌ ಪಟ್ಟಿಗೆ ಹೊಸದಾಗಿ 58 ನಗರಗಳು ಸೇರ್ಪಡೆಯಾಗಿದ್ದು, ಸದ್ಯ 100ಕ್ಕೂ ಹೆಚ್ಚು ದೇಶಗಳ 408 ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಹೊಂದಿವೆ ಎಂದು ಯೆನೆಸ್ಕೊ ಮಹಾನಿರ್ದೇಶಕ ಆಡ್ರೆ ಅಜೌಲೆ ತಿಳಿಸಿದ್ದಾರೆ. 

ADVERTISEMENT

ಸುಸ್ಥಿರ ನಗರಾಭಿವೃದ್ಧಿಗೆ ಸೃಜನಶೀಲ ಕೊಡುಗೆಗಳನ್ನು ಪರಿಗಣಿಸಿ ಈ ನಗರಗಳನ್ನು ಆಯ್ಕೆ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.