ADVERTISEMENT

ಲಖನೌದ ಲುಲು ಮಾಲ್ ವಿವಾದ: ಸಂತನ ಬಂಧನ

ನಮಾಜ್‌ ಮಾಡಿದ್ದಾರೆಂದು ಆರೋಪಿಸಿ ಮಾಲ್ ‘ಪವಿತ್ರ’ಗೊಳಿಸಲು ಮುಂದಾದ ಮುನಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 14:34 IST
Last Updated 19 ಜುಲೈ 2022, 14:34 IST
ಲುಲು ಮಾಲ್‌ –ಪಿಟಿಐ
ಲುಲು ಮಾಲ್‌ –ಪಿಟಿಐ   

ಲಖನೌ: ಇಲ್ಲಿನ ಲುಲು ಮಾಲ್‌ನಲ್ಲಿ ಮುಸ್ಲಿಂ ಯುವಕರು ನಮಾಜ್‌ ಮಾಡಿದ್ದಾರೆಂದು ಆರೋಪಿಸಿ ಮಾಲ್‌ ಅನ್ನು ‘ಪವಿತ್ರ’ಗೊಳಿಸಲು ತೆರಳಿದ ಆರೋಪ ಸಂಬಂಧ ಅಯೋಧ್ಯೆ ಮೂಲದ ಸಂತ ಪರಮಹಂಸ ಆಚಾರ್ಯ ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇತ್ತೀಚೆಗೆ ಲುಲು ಮಾಲ್‌ನಲ್ಲಿ ಯುವಕರು ನಮಾಜ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಇದನ್ನು ವಿರೋಧಿಸಿ ಕೇಸರಿ ಕಾರ್ಯಕರ್ತರು ಪ್ರಕರಣ ದಾಖಲಿಸಿ, ಮಾಲ್‌ನಲ್ಲಿ ಹನುಮಾನ್‌ ಚಾಲೀಸಾ ಪಠಣಕ್ಕೆ ಮುಂದಾಗಿದ್ದರು. ಸದ್ಯ ಚಾಲೀಸಾ ಪಠಣಕ್ಕೆ ಮುಂದಾದವರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೆ ನಮಾಜ್‌ ಮಾಡಿದ ಆರೋಪ ಸಂಬಂಧ ಮಹಮ್ಮದ್ ರೆಹಾನ್‌, ಅತೀಫ್‌ ಖಾನ್‌, ಮಹಮ್ಮದ್‌ ಲುಕ್ಮಾನ್‌ ಮತ್ತು ಮಹಮ್ಮದ್‌ ನೂಮನ್‌ ಎಂಬವರನ್ನೂ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಘಟನೆ ನಂತರ ಮಾಲ್‌ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಮಾಲ್‌ಗಳು ರಾಜಕೀಯ ಕುರುಕ್ಷೇತ್ರಗಳಾಗುತ್ತಿವೆ. ಕೋಮು ಸಾಮರಸ್ಯ ಕದಡಲು ಯತ್ನಿಸುವ ಸಣ್ಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಿ ಎಂದು ಈಚೆಗೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪೊಲೀಸರಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.