
ಸ್ಯಾನ್ ಫ್ರಾನ್ಸಿಸ್ಕೊ: ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಹೆಚ್ಚಿನ ಅಪಾಯದ ರೋಗಿಗಳಲ್ಲಿ ಕಡಿಮೆ ವೈಫಲ್ಯದ ಪ್ರಮಾಣವನ್ನು ಸಾಧಿಸುವ ಮೂಲಕ ಅಮೆರಿಕ ನಿರ್ಮಿತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಸ್ಟೆಂಟ್‌ಗಿಂತಲೂ ಕ್ಷಮತೆ ಪ್ರದರ್ಶಿಸಿದೆ.
ಬುಧವಾರ ಇಲ್ಲಿ ಮುಕ್ತಾಯಗೊಂಡ ಹೃದ್ರೋಗ ತಜ್ಞರ ಜಾಗತಿಕ ಸಮ್ಮೇಳನದಲ್ಲಿ, ದೆಹಲಿಯ ಬಾತ್ರಾ ಆಸ್ಪತ್ರೆಯ ಅಧ್ಯಕ್ಷ ಮತ್ತು ಡೀನ್, ಪ್ರಸಿದ್ಧ ಭಾರತೀಯ ಹೃದಯ ತಜ್ಞ ಡಾ. ಉಪೇಂದ್ರ ಕೌಲ್, ಭಾರತದಲ್ಲಿ ನಡೆದ ‘ಟುಕ್ಸೆಡೊ-2‘ ಎಂಬ ಪ್ರಯೋಗದ ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು.
ಈ ಪ್ರಯೋಗದಲ್ಲಿ ಭಾರತದಲ್ಲಿ ತಯಾರಿಸಿರುವ ಹೊಸ ಪೀಳಿಗೆಯ ಹೃದಯ ಸ್ಟೆಂಟ್ ಸುಪ್ರಾಫ್ಲೆಕ್ಸ್ ಕ್ರೂಜ್ ಅನ್ನು ಅಮೆರಿಕದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಕ್ಸಿಯೆನ್ಸ್ ಕ್ಷಮತೆಯೊಂದಿಗೆ ಹೋಲಿಕೆ ಮಾಡಲಾಗಿದೆ.
66 ಭಾರತೀಯ ಹೃದ್ರೋಗ ಕೇಂದ್ರಗಳಲ್ಲಿ ನಡೆಸಲಾದ ಈ ಪ್ರಯೋಗವು ಮಧುಮೇಹ ಮತ್ತು ಹೃದಯದ ಬಹು ನಾಳದ ಸಮಸ್ಯೆ ರೋಗಿಗಳಂತಹ ಹೆಚ್ಚು ಸಂಕೀರ್ಣ ರೋಗಿಗಳ ಮೇಲೆ ನಿರ್ದಿಷ್ಟವಾಗಿ ಕೇಂದ್ರೀಕರಿಸಿತ್ತು.
ಈ ಪ್ರಯೋಗದಲ್ಲಿ ಭಾಗವಹಿಸಿದರ ಪೈಕಿ ಶೇ 80ರಷ್ಟು ಮಂದಿ ಹೃದಯದ ಬಹು ನಾಳಗಳ ಸಮಸ್ಯೆ ಹೊಂದಿದ್ದರು.
ಭಾರತೀಯ ಸ್ಟೆಂಟ್‌ನ ಫಲಿತಾಂಶಗಳು ಅಗಾಧವಾಗಿ ಸಕಾರಾತ್ಮಕವಾಗಿದ್ದು, ಸುಪ್ರಾಫ್ಲೆಕ್ಸ್ ಕ್ರೂಜ್‌ನ ಕ್ಷಮತೆಯು ಸ್ಥಾಪಿತ ಅಂತರರಾಷ್ಟ್ರೀಯ ಮಾನದಂಡಗಳಿಗಿಂತ ಅನುಗುಣವಾಗಿದೆ ಎಂದು ತೋರಿಸಿದೆ.
ಸ್ಟೆಂಟ್, ಟಾರ್ಗೆಟ್ ಲೆಷನ್ ಫೇಲ್‌ನಲ್ಲಿ(ಟಿಎಲ್‌ಎಫ್) ಭಾರತದಲ್ಲಿ ತಯಾರಾದ ಸ್ಟೆಂಟ್ ಗಮನಾರ್ಹವಾಗಿ ಕಡಿಮೆ ವೈಫಲ್ಯ ಫಲಿತಾಂಶವನ್ನು ನೀಡಿದೆ ಎಂದು ದತ್ತಾಂಶ ಬಹಿರಂಗಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.