ADVERTISEMENT

ವಿದ್ಯುತ್‌ ಸ್ಪರ್ಶದಿಂದ ಒಂದೇ ಕುಟುಂಬದ ಆರು ಮಂದಿ ಸಾವು

ಪಿಟಿಐ
Published 11 ಜುಲೈ 2021, 9:20 IST
Last Updated 11 ಜುಲೈ 2021, 9:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಛತ್ತರ್‌ಪುರ: ‘ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಿರ್ಮಾಣ ಕಾರ್ಯದ ವೇಳೆ ವಿದ್ಯುತ್‌ ಸ್ಪರ್ಶದಿಂದ ಒಂದೇ ಕುಟುಂಬ ಆರು ಮಂದಿ ಮೃತ‍ಪಟ್ಟಿದ್ಧಾರೆ’ ಎಂದು ‍ಪೊಲೀಸರು ತಿಳಿಸಿದ್ದಾರೆ.

‘ಮಹುವಾ ಜ್ಹಾಲಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ ವೇಳೆ ಈ ದುರಂತ ಸಂಭವಿಸಿದೆ’ ಎಂದು ಬಿಜಾವರ್‌ ಪೊಲೀಸ್‌ ಠಾಣಾ ಉಸ್ತುವಾರಿ ಮುಕೇಶ್‌ ಸಿಂಗ್‌ ಠಾಕೂರ್‌ ಹೇಳಿದರು.

‘ಶಟರ್‌ ಪ್ಲೇಟ್‌ಗಳನ್ನು ತೆಗೆಯಲು ವ್ಯಕ್ತಿಯೊಬ್ಬ ಟ್ಯಾಂಕ್‌ನೊಳಗೆ ಇಳಿದಿದ್ದ. ಆಗ ಟ್ಯಾಂಕ್‌ನಲ್ಲಿ ಮಾಡಲಾಗಿದ್ದ ಬೆಳಕಿನ ವ್ಯವಸ್ಥೆಯಲ್ಲಿ ವಿದ್ಯುತ್‌ ಸೋರಿಕೆ ಉಂಟಾಗಿ ಪ್ಲೇಟ್‌ಗಳಿಗೆ ವಿದ್ಯುತ್ ಸ್ಪರ್ಶಿಸಿ ಆಘಾತ ಸಂಭವಿಸಿತು. ಆತನನ್ನು ರಕ್ಷಿಸಲು ಕುಟುಂಬದ ಇತರ ಸದಸ್ಯರು ಕೂಡ ಟ್ಯಾಂಕಿಗೆ ಇಳಿದಾಗ ಎಲ್ಲರೂ ವಿದ್ಯುತ್‌ ಆಘಾತಕ್ಕೆ ಒಳಗಾದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪ‍ಟ್ಟಿದ್ದರು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.