ADVERTISEMENT

ಅಕ್ರಮ ಸಾಗಣೆ: 45 ಹಸುಗಳ ರಕ್ಷಣೆ, ಮೂವರ ಬಂಧನ

ಪಿಟಿಐ
Published 5 ಜನವರಿ 2022, 13:55 IST
Last Updated 5 ಜನವರಿ 2022, 13:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಎರಡು ಟ್ರಕ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 45 ಹಸುಗಳನ್ನು ಪೊಲೀಸರು ರಕ್ಷಿಸಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪೊಲೀಸರು ನಿಖರ ಮಾಹಿತಿಯನ್ನು ಆಧರಿಸಿ ಮಂಗಳವಾರನಿಖೈ ತಲಾಯಿ ಗ್ರಾಮದಲ್ಲಿ ಟ್ರಕ್‌ಗಳನ್ನು ತಡೆದರು. ಈ ವೇಳೆ ಎರಡು ಟ್ರಕ್‌ಗಳಲ್ಲಿ ಹಸುಗಳ ಕಾಲುಗಳನ್ನು ಕಟ್ಟಿ, ಸಾಗಿಸುತ್ತಿರುವುದು ಪತ್ತೆಯಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಧರ್ಮರಾಜ್‌ ಮೀನಾ ಅವರು ಮಾಹಿತಿ ನೀಡಿದರು.

‘ರಾಜಸ್ಥಾನದ ನಂಬರ್‌ ಪ್ಲೇಟ್‌ ಹೊಂದಿದ್ದ ಟ್ರಕ್‌ವೊಂದರಿಂದ 24 ಹಾಗೂ ಇನ್ನೊಂದು ಟ್ರಕ್‌ನಿಂದ 21 ಹಸುಗಳನ್ನು ರಕ್ಷಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.