ADVERTISEMENT

ಮಧ್ಯಪ್ರದೇಶ | ಶಾಜಾಪುರ ಜಿಲ್ಲೆಯ 11 ಗ್ರಾಮಗಳ ಹೆಸರು ಬದಲಾವಣೆ: CM ಮೋಹನ್ ಯಾದವ್

ಪಿಟಿಐ
Published 13 ಜನವರಿ 2025, 4:14 IST
Last Updated 13 ಜನವರಿ 2025, 4:14 IST
ಮೋಹನ್ ಯಾದವ್
ಮೋಹನ್ ಯಾದವ್   

ಭೋಪಾಲ್: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ 11 ಗ್ರಾಮಗಳ ಹೆಸರನ್ನು ಬದಲಾಯಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ನಿಪಾನಿಯಾ ಹಿಸ್ಸಾಮುದ್ದೀನ್ ಗ್ರಾಮದ ಹೆಸರನ್ನು ನಿಪಾನಿಯಾ ದೇವ್ ಎಂದು ಕರೆಯಲಾಗುತ್ತದೆ. ಆದೇ ರೀತಿ ಧಬ್ಲಾ ಹುಸೇನ್‌ಪುರವನ್ನು ಧಬ್ಲಾ ರಾಮ್, ಮೊಹಮ್ಮದ್‌ಪುರ್ ಪವಾಡಿಯಾವನ್ನು ರಾಂಪುರ್ ಪವಾಡಿಯಾ, ಖಜೂರಿ ಅಲ್ಲಾದಾದ್ ಅನ್ನು ಖಜುರಿ ರಾಮ್, ಹಾಜಿಪುರವನ್ನು ಹೀರಾಪುರ್, ಮೊಹಮ್ಮದ್‌ಪುರ ಮಚ್ನೈಯನ್ನು ಮೋಹನ್‌ಪುರ, ರಿಚ್ರಿ ಮೊರಾದಾಬಾದ್ ಅನ್ನು ರಿಚ್ರಿ ಖಲೀಲ್‌ಪುರ, ಉಂಚವಾಡವನ್ನು ಉಂಚೋಡ್, ಘಟ್ಟಿ ಮುಖ್ತಿಯಾರ್‌ಪುರವನ್ನು ಘಟ್ಟಿ ಮತ್ತು ಶೇಖ್‌ಪುರ ಬೋಂಗಿ ಅವಧಪುರಿ’ ಎಂದು ಹೆಸರು ಬದಲಾಯಿಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಯಾದವ್ ಅವರು ರಾಜ್ಯ ಸರ್ಕಾರದ ಲಾಡ್ಲಿ ಬೆಹ್ನಾ ಯೋಜನೆಯಡಿ 1.27 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ₹1,553 ಕೋಟಿ ಹಣವನ್ನು ಜಮೆ ಮಾಡಿದ್ದಾರೆ.

ADVERTISEMENT

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ 55 ಲಕ್ಷ ಫಲಾನುಭವಿಗಳ ಖಾತೆಗೆ ₹335 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಜತೆಗೆ, ಎಲ್‌ಪಿಜಿ ಸಿಲಿಂಡರ್ ರೀಫಿಲ್ ಯೋಜನೆಯಡಿ 26 ಲಕ್ಷ ಮಹಿಳಾ ಫಲಾನುಭವಿಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.