ADVERTISEMENT

ಮಧ್ಯಪ್ರದೇಶ | ಸ್ಫೋಟಕ ಮಿಶ್ರಿತ ಆಹಾರ ಸೇವಿಸಿದ ಹಸುವಿಗೆ ಗಾಯ

ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಗಿಂಜ್ರಿಯಲ್ಲಿ ಘಟನೆ

ಪಿಟಿಐ
Published 17 ಜೂನ್ 2020, 6:42 IST
Last Updated 17 ಜೂನ್ 2020, 6:42 IST
ಹಸುಗಳು
ಹಸುಗಳು    

ಉಮರಿಯಾ, ಮಧ್ಯಪ್ರದೇಶ: ಉಮರಿಯಾ ಜಿಲ್ಲೆಯ ಗಿಂಜ್ರಿ ಗ್ರಾಮದಲ್ಲಿ ಹಸುವೊಂದಕ್ಕೆ ಸ್ಫೋಟ ಮಿಶ್ರಿತ ಆಹಾರ ನೀಡಲಾಗಿದ್ದು, ಸ್ಫೋಟದಿಂದಾಗಿ ಅದರ ಬಾಯೊಳಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

ಗ್ರಾಮದ ಓಂ ಪ್ರಕಾಶ್ ಅಗ್ರವಾಲ್‌ ಅವರಿಗೆ ಸೇರಿದ ಹಸು ಗಾಯಗೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಮನೆಯ ಸುತ್ತಮುತ್ತ ಮೇಯುತ್ತಿದ್ದ ಹಸು, ಜೂನ್‌ 14ರಂದು ಮನೆಗೆ ಬರಲಿಲ್ಲ. ಕೊನೆಗೆ ಮಂಗಳವಾರ ಪತ್ತೆಯಾಯಿತು. ಅದರ ದವಡೆಯಲ್ಲಿ ಗಾಯ ಕಂಡು ಬಂತು. ಸ್ಫೋಟಕ ಬೆರೆಸಿದ ಆಹಾರ ನೀಡಲಾಗಿತ್ತು, ಹೀಗಾಗಿ ಅದರ ಬಾಯಲ್ಲಿ ಗಾಯಗಳಾಗಿವೆ’ ಎಂದು ಓಂ ಪ್ರಕಾಶ್‌ ಹೇಳಿದ್ದಾರೆ.

ADVERTISEMENT

‘ಹಸು ಈಗ ಏನನ್ನೂ ತಿನ್ನುವ ಸ್ಥಿತಿಯಲ್ಲಿ ಇಲ್ಲ. ಒಂದು ತಿಂಗಳಿನ ತನ್ನ ಕರುವಿಗೂ ಹಾಲು ಕುಡಿಸಲೂ ಅದಕ್ಕೆ ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

‘ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲು ವಿಫಲರಾದರೆ, ನಾವೇ ಅವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಬಜರಂಗ ದಳದ ಮುಖಂಡ ಉಪೇಂದ್ರ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.