ಭೋಪಾಲ್: ಮಧ್ಯಪ್ರದೇಶದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 27ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತ ಕಳವು ನಡೆದಿದೆ ಮತ್ತು ಬಿಜೆಪಿಯು ಇದರಿಂದ ‘ಅನೈತಿಕ ಅನುಕೂಲ’ ಪಡೆದಿದೆ ಎಂದು ಕಾಂಗ್ರೆಸ್ ನಾಯಕ ಉಮಂಗ್ ಸಿಂಘರ್ ಮಂಗಳವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಕೆಲವೇ ತಿಂಗಳು ಇದ್ದಾಗ ಲಕ್ಷಾಂತರ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡರು’ ಎಂದು ಹೇಳಿದರು.
2023ರ ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ರಾಜ್ಯದ ಮತದಾರರ ಸಂಖ್ಯೆ 4.64 ಲಕ್ಷ ಹೆಚ್ಚಾಗಿತ್ತು. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಈ ಸಂಖ್ಯೆ 16.05 ಲಕ್ಷ ಹೆಚ್ಚಾಯಿತು. ಅದರರ್ಥ ಪ್ರತಿ ದಿನ 26,000 ಮತದಾರರನ್ನು ಸೇರ್ಪಡೆ ಮಾಡಲಾಗಿದೆ (ಆಗಸ್ಟ್–ಅಕ್ಟೋಬರ್) ಎಂದು ದೂರಿದರು.
ಮಧ್ಯಪ್ರದೇಶವೂ ಯೋಜಿತ ಚುನಾವಣಾ ಅಕ್ರಮದ ಸಂತ್ರಸ್ತ ರಾಜ್ಯ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.