ADVERTISEMENT

ಮಧ್ಯಪ್ರದೇಶ: ಆಟೋ ರಿಕ್ಷಾ-ಟ್ರಕ್ ಡಿಕ್ಕಿಯಾಗಿ 5 ಮಂದಿ ಸಾವು, ನಾಲ್ವರಿಗೆ ಗಾಯ

ಪಿಟಿಐ
Published 5 ಮೇ 2022, 9:29 IST
Last Updated 5 ಮೇ 2022, 9:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರೈಸನ್: ಮಧ್ಯಪ್ರದೇಶದ ರಾಯ್‌ಸೆನ್‌ ಜಿಲ್ಲೆಯಲ್ಲಿ ಗುರುವಾರ ಆಟೋ ರಿಕ್ಷಾ ಮತ್ತು ಮಿನಿ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಐವರು ಸಾವಿಗೀಡಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಓರ್ವಬಾಲಕಿ ಸಹ ಸೇರಿದ್ದು, ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಉಮ್ರಾವ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಡಿಯಾ ಸೇತುವೆ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮೃತ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಆಟೋ-ರಿಕ್ಷಾ ರಾಯ್‌ಸೆನ್‌ನಿಂದ ರಾಜ್ಯದ ರಾಜಧಾನಿ ಭೋಪಾಲ್ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದ್ದಾರೆ.

ಆಟೋ ರಿಕ್ಷಾದಲ್ಲಿದ್ದ ನಾಲ್ವರು ಮತ್ತು ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಸಾಗರ್ ಜಿಲ್ಲೆಯ ನಿವಾಸಿ ಧನರಾಜ್ ಗೋಸ್ವಾಮಿ (35), ಭೋಪಾಲ್‌ನ ಅರ್ಬಾಜ್ ಖಾನ್ (19), ಇಮಾನುದ್ದೀನ್ (28), ರೈನ್ ಖುರೇಷಿ (14) ಮತ್ತು ಅಮಿತ್ ಲೋಧಿ (27) ಎಂದು ಗುರುತಿಸಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಸೇರಿದಂತೆ ನಾಲ್ವರು ಗಾಯಾಳುಗಳನ್ನು ಭೋಪಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡೂ ವಾಹನಗಳ ಚಾಲಕರ ವಿರುದ್ಧ ಪೊಲೀಸರು ಅತಿವೇಗದ ಚಾಲನೆಗಾಗಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.